ನವದೆಹಲಿ: ಒಡಿಶಾ ರೈಲು ದುರಂತ (Odisha Train Tragedy) ದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆರ್‍ಜೆಡಿ ಮುಖ್ಯಸ್ಥ ಹಾಗೂ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ (Lalu Prasad Yadav) ಒತ್ತಾಯಿಸಿದ್ದಾರೆ.
ದುರಂತದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿರ್ಲಕ್ಯದಿಂದಾಗಿಯೇ ಈ ಅವಘಡ ಸಂಭವಿಸಿದೆ. ಅಜಾಗರೂಕತೆ ತೋರಿರುವುದು ಇಷ್ಟೊಂದು ದೊಡ್ಡ ಮಟ್ಟದ ಸಾವು-ನೋವುಗಳಿಗೆ ಕಾರಣಾಗಿದೆ ಎಂದು ಕಿಡಿಕಾರಿದರು.
Advertisement
#WATCH | RJD chief & former Railways Minister Lalu Prasad Yadav speaks on #BalasoreTrainAccident; says, "…The manner in which they showed negligence & didn't show alertness led to such a large number of casualties…There should be a high-level inquiry and action should be… pic.twitter.com/01WgROya1t
— ANI (@ANI) June 3, 2023
Advertisement
ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಲ್ಲದೆ ಈ ಅವಘಡಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ
Advertisement
#WATCH | Odisha | Rescue operation at the spot of #BalasoreTrainAccident has concluded and restoration work is underway. Latest visuals from the spot.
As per the latest information, the death toll in the accident stands at 261. pic.twitter.com/ufemKstvSu
— ANI (@ANI) June 3, 2023
Advertisement
ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಚೆನ್ನೈ-ಕೊರಮಂಡಲ್ ಎಕ್ಸ್‍ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್‍ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ದುರಂತಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 261 ಕ್ಕೆ ಏರಿದೆ. ಅಲ್ಲದೇ 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಒಡಿಶಾ ರೈಲು ದುರಂತ, ಲಾಲೂ ಪ್ರಸಾದ್ ಯಾದವ್, odisha train tragedy, Balasore Train Accident, lalu prasad yadav