ಪದ್ಮಶ್ರೀ ಪುರಸ್ಕೃತ, ಗಾಯಕ ಮೊಗಿಲಯ್ಯ (Mogilaiah) ಅವರು ಇಂದು (ಡಿ.19) ಬೆಳಗ್ಗೆ ವಿಧಿವಶರಾಗಿದ್ದಾರೆ. ವಾರಂಗಲ್‌ನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಕೀರ್ತಿ ಸುರೇಶ್ ಮದುವೆ ಸಂಭ್ರಮದಲ್ಲಿ ವಿಜಯ್- ಫೋಟೋ ಹಂಚಿಕೊಂಡ ನಟಿ
Advertisement
73 ವರ್ಷದ ಮೊಗಿಲಯ್ಯ ಅವರು ಹಲವು ದಿನಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಇಂದು ಮೊಗಿಲಯ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
Advertisement
Advertisement
ಅಂದಹಾಗೆ, ‘ಬಲಗಂ’ (Balagam Film) ಸಿನಿಮಾದಲ್ಲಿ ಹಾಡುವ ಮೂಲಕ ಖ್ಯಾತಿ ಗಳಿಸಿದರು. ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ಗಾಗಿ ಶೀರ್ಷಿಕೆ ಗೀತೆಯನ್ನು ಹಾಡಿದರು.