– ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ!
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಆಗಸ್ಟ್ 31)ರಂದು ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ 7 ನಿರ್ದೇಶಕರನ್ನು ಕಮಲ ಪಡೆ ಹೈಜಾಕ್ ಮಾಡಿದೆ.
ಈ ಮೂಲಕ ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿ ಎಚ್.ಡಿ.ರೇವಣ್ಣ ಅವರದ್ದೇ ತಂತ್ರದಲ್ಲಿ ಬಿಜೆಪಿ ನಾಯಕರು ಬಿಗ್ ಶಾಕ್ ನೀಡಿದ್ದಾರೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ 7 ಜನ ಸೇರಿ ಒಟ್ಟು 11 ಮಂದಿ ಕೆಎಂಎಫ್ ನಿರ್ದೇಶಕರನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ.
Advertisement
Advertisement
ಅವಿರೋಧವಾಗಿ ಆಯ್ಕೆಯಾಗಲು ಕೆಎಂಎಫ್ ನಿರ್ದೇಶಕರನ್ನು ಜಾರಕಿಹೊಳಿ ಸಹೋದರರು ಹೈಜಾಕ್ ಮಾಡಿದ್ದಾರೆ. ಈ ಪೈಕಿ ಕಾಂಗ್ರೆಸ್ 6, ಜೆಡಿಎಸ್ 1, ಬಿಜೆಪಿಯ ಅಮರನಾಥ ಜಾರಕಿಹೊಳಿ, ಸೇರಿ ಇಬ್ಬರು ನಿರ್ದೇಶಕರು ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂಬೈಗೆ ಹಾರಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ ಬಹುತೇಕ್ ಖಚಿತ ಎನ್ನಲಾಗುತ್ತಿದೆ.
Advertisement
ಕೆಎಂಎಫ್ ಬಲಾಬಲ:
ಕಾಂಗ್ರೆಸ್ ಬೆಂಬಲಿತ 8 ಜನ, ಜೆಡಿಎಸ್ ಬೆಂಬಲಿತ 3 ಮಂದಿ, ಬಿಜೆಪಿ ಬೆಂಬಲಿತ ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಸರ್ಕಾರದಿಂದ ನಾಮನಿರ್ದೇಶಕರಾಗಿ ಬಾಲಚಂದ್ರ ಜಾರಕಿಹೊಳಿ ನೇಮಕವಾಗಿದ್ದಾರೆ. ಅವರಿಗೆ ಹಾಗೂ ಮೂವರು ಅಧಿಕಾರಿಗಳಿಗೆ ಮತದಾನದ ಹಕ್ಕು ಇದೆ. ಈ ಪೈಕಿ 6 ಕಾಂಗ್ರೆಸ್, 1 ಜೆಡಿಎಸ್, 1 ಬಿಜೆಪಿ ಮತ್ತು 2 ನಾಮನಿರ್ದೇಶಕ ಅಧಿಕಾರಿಗಳ ಬೆಂಬಲ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇದೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ 11 ನಿರ್ದೇಶಕರ ಬೆಂಬಲ ವ್ಯಕ್ತವಾಗಿದ್ದು, ಬಹುತೇಕ ಅವಿರೋಧ ಆಯ್ಕೆ ಖಚಿತ ಎನ್ನಲಾಗುತ್ತದೆ.
Advertisement
ಈ ಹಿಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕೆಎಂಎಫ್ ನಿರ್ದೇಶಕರನ್ನು ಹೈಜಾಕ್ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಕ್ಷಣವೇ ಮಧ್ಯ ಪ್ರವೇಶಿಸಿದ್ದ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವು ಚುನಾವಣೆಯನ್ನು ಮುಂದೂಡಿತ್ತು.