ಬಬಲಾದಿ ಮಠದ ಶ್ರೀಗಳ ನುಡಿ ಎಂದಿಗೂ ಸುಳ್ಳಾಗಲ್ಲ: ಬಾಲಚಂದ್ರ ಜಾರಕಿಹೊಳಿ

Public TV
1 Min Read
blg balachandra jarakiholi

ಬೆಳಗಾವಿ: ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಜಾತ್ರಾ ಮಹೋತ್ಸವದಲ್ಲಿ ಬಾಲಚಂದ್ರ ಜಾರಕಿಹೊಳಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು.

ಬಬಲಾದಿ ಮಠದ ಪೂಜ್ಯರು ನುಡಿಯುವ ಮಾತುಗಳು ಸತ್ಯದ ಪ್ರತೀಕವಾಗಿವೆ. ಮಠದ ಇತಿಹಾಸ ಹಾಗೂ ಸಂಸ್ಕೃತಿ ಬಹಳ ದೊಡ್ಡದಿದೆ. ಅದರಲ್ಲೂ ನಮ್ಮ ಬಬಲಾದಿ ಮಠದ ಶಿವಯ್ಯ ಸ್ವಾಮಿಗಳು ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ. ಲಕ್ಷಾಂತರ ಭಕ್ತರನ್ನು ಸಂಪಾದಿಸಿದ್ದಾರೆ. ಇಲ್ಲಿ ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುವ ಜಾತ್ರೆಗೆ ಸಾಕಷ್ಟು ಜನರು ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಾರೆ. ಧಾರ್ಮಿಕತೆಗೆ ಮತ್ತೊಂದು ಹೆಸರೇ ಬಬಲಾದಿ ಮಠ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

balachandra jarakiholi

ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ, ಆಶೀರ್ವದಿಸಿದರು.

ಜಾತ್ರೆಯಲ್ಲಿ ಗಮನ ಸೆಳೆದ ಕುಸ್ತಿ:
ಜಾತ್ರೆ ಹಿನ್ನೆಲೆ ಮಠದಲ್ಲಿ ಅಂತರಾಷ್ಟ್ರೀಯ ಜಂಗಿ ನಿಖಾಲಿ ಕುಸ್ತಿಗಳು ಜರುಗಿ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸಿದವು. ಅದರಲ್ಲೂ ಅಂತರಾಷ್ಟ್ರೀಯ ಕುಸ್ತಿ ಪಟುಗಳಾದ ಹರ್ಯಾಣದ ಭಾರತ್ ಕೇಸರಿ ಮಂಜೀತ್ ಸಿಂಗ್ ಖತ್ರಿ ಹಾಗೂ ಇರಾನ್ ದೇಶದ ಸೈಯ್ಯದ್ ಮಹ್ಮದ್ ಪೈಲ್ವಾನ್ ಕುಸ್ತಿ ರೋಚಕತೆಯಿಂದ ಕೂಡಿತ್ತು.

ಸತತ ಮೂರನೇ ಬಾರಿಗೆ ಜಮಖಂಡಿ ತಾಲೂಕಿನ ಕಂಕಣವಾಡಿಯ ಶಿವಯ್ಯ ಪೂಜೇರಿ ಬೆಳ್ಳಿ ಗಧೆ ಪಡೆದುಕೊಂಡರು. ಕರ್ನಾಟಕ ಕೇಸರಿ ದಾವಣಗೆರೆಯ ಕಾರ್ತಿಕ್ ಕಾಟೆ ಅವರ ಕುಸ್ತಿಯಂತೂ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿ ಪರಿಣಮಿಸಿತು.

Share This Article
Leave a Comment

Leave a Reply

Your email address will not be published. Required fields are marked *