ಬಕ್ರೀದ್ (Bakrid) ಅಥವಾ ಈದ್ ಅಲ್-ಅಧಾವು ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಆಚರಣೆಯ ಹಬ್ಬವಾಗಿದೆ. ಈ ವರ್ಷ ಇದನ್ನು ಜೂನ್ 17ರ ಸೋಮವಾರದಂದು ಆಚರಿಸಲಾಗುತ್ತದೆ. ಈ ದಿನದಂದು ಸ್ನೇಹಿತರು ಮತ್ತು ಕುಟುಂಬದವರು ಸಾಂಪ್ರದಾಯಿಕ ಭೋಜನಕ್ಕೆ ಸೇರುತ್ತಾರೆ. ಖಾರದ ಭಕ್ಷ್ಯ ಗಳ ಜೊತೆಗೆ ಸಿಹಿತಿಂಡಿಗಳು ಕೂಡ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಬಕ್ರೀದ್ ಸ್ಪೆಷಲ್ ಶೀರ್ ಖುರ್ಮಾ (Sheer Khurma) ಮಾಡುವ ಸರಳ ಹಾಗೂ ಸಿಂಪಲ್ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಸೆವಾಯ್ (ಶ್ಯಾವಿಗೆ)- 50 ಗ್ರಾಂ
ಹಾಲು- 1 ಲೀ
ತುಪ್ಪ- 40 ಗ್ರಾಂ
ಗೋಡಂಬಿ- 20 ಗ್ರಾಂ
ಬಾದಾಮಿ- 20 ಗ್ರಾಂ
ಪಿಸ್ತಾ- 10 ಗ್ರಾಂ
ಚರೋಲಿ- 10 ಗ್ರಾಂ
ಖಾರಕ್ (ಒಣಗಿದ ಖರ್ಜೂರ)- 20 ಗ್ರಾಂ
ಒಣದ್ರಾಕ್ಷಿ- 20 ಗ್ರಾಂ
ಗಸಗಸೆ ಬೀಜಗಳು- 10 ಗ್ರಾಂ
ತೆಂಗಿನಕಾಯಿ ತುರಿ- 50 ಗ್ರಾಂ
ಸಕ್ಕರೆ- 120 ಗ್ರಾಂ
ಏಲಕ್ಕಿ ಪುಡಿ- 1 ಟೀಸ್ಪೂನ್
ಕೇಸರಿ- 1 ಚಿಟಿಕೆ
ಮಾಡುವ ವಿಧಾನ:
* ಗೋಡಂಬಿ, ಬಾದಾಮಿ, ಪಿಸ್ತಾ ಮತ್ತು ಒಣಗಿದ ಖರ್ಜೂರವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಣದ್ರಾಕ್ಷಿ ಮತ್ತು ಚರೋಲಿ ಹಾಗೇ ಇರಲಿ.
* ಏಲಕ್ಕಿ ಕಾಳುಗಳನ್ನು ಬಾಣಲೆಯಲ್ಲಿ ಸ್ಲಲ್ಪ ಟೋಸ್ಟ್ ಮಾಡಿ ಪುಡಿಮಾಡಿ. ಉತ್ತಮವಾದ ಸ್ಟ್ರೈನರ್ ಮೂಲಕ ಶೋಧಿಸಿಕೊಳ್ಳಿ.
* ಬಾಣಲೆಯಲ್ಲಿ 20 ಗ್ರಾಂ ತುಪ್ಪವನ್ನು ಬಿಸಿ ಮಾಡಿ ಮತ್ತು ಎಲ್ಲಾ ಒಣಗಿದ ಹಣ್ಣುಗಳು, ಗಸಗಸೆ ಮತ್ತು ತುರಿದ ತೆಂಗಿನಕಾಯಿಯನ್ನು ಕಡಿಮೆ ಉರಿಯಲ್ಲಿ ಸುಮಾರು 2 ನಿಮಿಷಗಳ ಕಾಲ ಗೋಲ್ಡನ್ ಕಲರ್ ಬರುವವರೆಗ ಹುರಿಯಿರಿ. ನಂತರ ಪ್ಯಾನ್‍ನಿಂದ ತೆಗೆದು ಪಕ್ಕಕ್ಕೆ ಇರಿಸಿ.
* ಇತ್ತ 20 ಗ್ರಾಂ ಹೆಚ್ಚು ತುಪ್ಪ ಸೇರಿಸಿ ಮತ್ತು ಶ್ಯಾವಿಗೆಯನ್ನು ಸುಮಾರು 4 ನಿಮಿಷಗಳ ಕಾಲ ಫ್ರೈ ಮಾಡಿ.
* ಈಗ ಅದೇ ಬಾಣಲೆಗೆ ಹಾಲು ಹಾಕಿ ಕುದಿಸಿ. ಒಂದು ಚಿಕ್ಕ ಬಟ್ಟಲಿನಲ್ಲಿ ಸುಮಾರು 2 ಚಮಚ ಉಗುರುಬೆಚ್ಚಗಿನ ಹಾಲನ್ನು ಸ್ಕೂಪ್ ಮಾಡಿ ಒಂದು ಚಿಟಿಕೆ ಕೇಸರಿ ಸೇರಿಸಿ.
* ಹಾಲು ಕುದಿಯುತ್ತಿದ್ದಂತೆಯೇ ಸೇವಾಯಿ ಮತ್ತು ಹುರಿದ ಒಣ ಹಣ್ಣುಗಳ ಜೊತೆಗೆ ಸಕ್ಕರೆಯನ್ನೂ ಸೇರಿಸಿ. ಹಾಲು ಸ್ವಲ್ಪ ದಪ್ಪವಾಗುವವರೆಗೆ ಎಲ್ಲವನ್ನೂ ಒಟ್ಟಿಗೆ 6 ರಿಂದ 8 ನಿಮಿಷಗಳ ಕಾಲ ಕುದಿಸಿ. ಕುಡಿಯಲು ಸಾಧ್ಯವಾಗುವಷ್ಟರ ಮಟ್ಟಿಗೆ ಕುದಿಸಿ.
* ನಂತರ ಪುಡಿಮಾಡಿದ ಏಲಕ್ಕಿ ಸೇರಿಸಿ. ಇನ್ನು ಬಾಣಲೆಯಿಂದ ಪಾತ್ರೆಗೆ ತೆಗೆದು ಹಾಕುವ ಸುಮಾರು 2 ನಿಮಿಷಗಳ ಮೊದಲು, ನೆನೆಸಿದ ಕೇಸರಿ ಸೇರಿಸಿ ಸರ್ವ್ ಮಾಡಿ.