ಬೆಂಗಳೂರು: ರಾತ್ರಿ ವೇಳೆ ಬಂದು ಟೀ, ಸಿಗರೇಟು ಫ್ರೀಯಾಗಿ ನೀಡುವಂತೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು (Chikkabidarakallu) ಗ್ರಾಮದ ರಾಘವೇಂದ್ರ ಬೇಕರಿಯಲ್ಲಿ ನಡೆದಿದೆ.
ಬೇಕರಿ ಮಾಲೀಕ ಮಂಜಯ್ಯ ಶೆಟ್ಟಿ ಹಲ್ಲೆಗೊಳಗಾಗಿದ್ದಾರೆ. ಭಾನುವಾರ ರಾತ್ರಿ 9:20ರ ಸುಮಾರಿಗೆ ಬೇಕರಿ ಮುಚ್ಚುವ ಸಮಯಕ್ಕೆ ರೌಡಿಗಳ ಗುಂಪೊಂದು ಬಂದಿದೆ. ಬೇಕರಿ ಬಳಿ ಬಂದು ಟೀ, ಸಿಗರೇಟು ಇನ್ನಿತರ ವಸ್ತುಗಳನ್ನ ಫ್ರೀಯಾಗಿ ನೀಡುವಂತೆ ಗಲಾಟೆ ಮಾಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಇದನ್ನೂ ಓದಿ: ಬಿರಿಯಾನಿ ಪಾರ್ಸೆಲ್‌ಗಾಗಿ 15 ನಿಮಿಷ ನಿಂತ ಬಸ್ – ಬಿಎಂಟಿಸಿ ವಿರುದ್ಧ ಪ್ರಯಾಣಿಕರು ಗರಂ
Advertisement
Advertisement
ಹಲ್ಲೆ ಮಾಡುವ ದೃಶ್ಯ ಬೇಕರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಬೇಕರಿ ಮಾಲೀಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪದೇ ಪದೇ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಕಾಂಡಿಮೆಟ್ಸ್ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸುವ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಗ್ರಹಿಸಿದ್ದಾರೆ.
Advertisement
ಈ ಪ್ರಕರಣದಲ್ಲಿ ಅಂಗಡಿ ಪಕ್ಕದ ರಸ್ತೆಯ ಆನಂದ್ ಹಾಗೂ ಇನ್ನಿತರರು ಹಲ್ಲೆ ನಡೆಸಿದ್ದು, ಖಂಡನೀಯ. ಕೂಡಲೇ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಕಾರ್ಮಿಕ ಸಂಘಗಳ ಮುಖ್ಯಸ್ಥರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಕುದುರೆ ಹಿಡಿದು ಓಡಿದ ವಿನೀಶ್ – ದರ್ಶನ್ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋ ನೋಡಿ