ನಾವು ಬೇಕರಿ, ಮಾಲ್ಗಳಿಗೆ ಹೋದಾಗ ಗಮನ ಸೆಳೆಯುವ ರುಚಿಕರ ಡೋನಟ್ಗಳನ್ನು ಸುಲಭವಾಗಿ ಮನೆಯಲ್ಲೂ ಮಾಡ್ಬೋದು ಎಂಬುದು ನಿಮಗೆ ತಿಳಿದಿದ್ಯಾ? ಇಲ್ಲ ಎಂದರೆ ನಾವು ಈ ಒಂದು ರೆಸಿಪಿಯನ್ನು ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ಮೊಟ್ಟೆ ಬಳಸದೇ ಮಾಗಿದ ಬಾಳೆಹಣ್ಣಿನಿಂದ ಡೋನಟ್ಗಳನ್ನು (Banana Donut) ತಯಾರಿಸುವುದು ಈ ರೆಸಿಪಿಯ ಇನ್ನೊಂದು ವಿಶೇಷತೆ. ಹಾಗಾದ್ರೆ, ಈ ಕೂಡಲೆ ನೀವೂ ಮನೆಯಲ್ಲಿ ಡೋನಟ್ ಮಾಡೋದನ್ನು ಕಲಿತುಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – ಕಾಲು ಕಪ್
ಮಾಗಿದ ಬಾಳೆಹಣ್ಣು – 3
ಕಂದು ಸಕ್ಕರೆ – ಅರ್ಧ ಕಪ್
ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
ಮೈದಾ ಹಿಟ್ಟು – ಮುಕ್ಕಾಲು ಕಪ್
ಓಟ್ಸ್ ಹಿಟ್ಟು – ಕಾಲು ಕಪ್
ಬೇಕಿಂಗ್ ಪೌಡರ್ – ಒಂದೂವರೆ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ನೀರು – ಕಾಲು ಕಪ್
ವಿನೆಗರ್ – ಅರ್ಧ ಟೀಸ್ಪೂನ್
ಚಾಕೋಲೇಟ್ ಐಸಿಂಗ್ಗೆ:
ಬೆಣ್ಣೆ – 2 ಟೀಸ್ಪೂನ್
ಸಕ್ಕರೆ ಪುಡಿ – 1 ಕಪ್
ಕೋಕೋ ಪೌಡರ್ – ಕಾಲು ಕಪ್
ನೀರು – 2 ಟೀಸ್ಪೂನ್ ಇದನ್ನೂ ಓದಿ: ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಡೋನಟ್ ಪ್ಯಾನ್ಗೆ ಬೆಣ್ಣೆಯನ್ನು ಗ್ರೀಸ್ ಮಾಡಿ, ಸ್ವಲ್ಪ ಮೈದಾ ಹಿಟ್ಟನ್ನು ಡಸ್ಟ್ ಮಾಡಿ ಇಟ್ಟುಕೊಳ್ಳಿ.
* ಈಗ ಒಂದು ಬೌಲ್ಗೆ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಹಾಕಿಕೊಳ್ಳಿ. ಅದಕ್ಕೆ ಕರಗಿಸಿದ ಬೆಣ್ಣೆ, ಕಂದು ಸಕ್ಕರೆ, ವೆನಿಲ್ಲಾ ಸಾರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಮೈದಾ ಹಿಟ್ಟು, ಓಟ್ಸ್ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು, ನೀರು ಹಾಗೂ ವಿನೆಗರ್ ಸೇರಿಸಿ, ನಯವಾದ ಹಿಟ್ಟಾಗುವವರೆಗೆ ಮಿಶ್ರಣ ಮಾಡಿ.
* ಈಗ ಡೋನಟ್ ಪ್ಯಾನ್ಗೆ ಈ ಹಿಟ್ಟನ್ನು ಹಾಕಿಕೊಂಡು 15 ನಿಮಿಷಗಳ ಕಾಲ 350 ಡಿಗ್ರಿ ಬಿಸಿಯಲ್ಲಿ ಓವನ್ನಲ್ಲಿಟ್ಟು ಬೇಯಿಸಿಕೊಳ್ಳಿ.
* ಬಳಿಕ ಅದನ್ನು ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಪ್ಯಾನ್ ಅನ್ನು ಮಗುಚಿ ಹಾಕಿ ಡೋನಟ್ಗಳನ್ನು ಪ್ಯಾನ್ಗಳಿಂದ ಬೇರ್ಪಡಿಸಿ.
* ಈಗ ಐಸಿಂಗ್ ತಯಾರಿಸಲು ಒಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ ಹಾಕಿ, ಪುಡಿ ಮಾಡಿದ ಸಕ್ಕರೆ ಹಾಗೂ ಕೋಕೋ ಪೌಡರ್ ಸೇರಿಸಿ ಸ್ವಲ್ಪ ನೀರು ಚಿಮುಕಿಸಿ ಮಿಶ್ರಣ ಮಾಡಿ.
* ಸ್ಥಿರತೆ ನೋಡಿಕೊಂಡು ನೀವು ಬೇಕೆಂದರೆ ಇನ್ನಷ್ಟು ನೀರು ಸೇರಿಸಬಹುದು.
* ಈಗ ತಣ್ಣದಾದ ಡೋನಟ್ಗಳನ್ನು ಅರ್ಧದಷ್ಟು ಕೋಕೋ ಪೌಡರ್ ಮಿಶ್ರಣದಲ್ಲಿ ಅದ್ದಿ, ತೆಗೆಯಿರಿ. ಐಸಿಂಗ್ ಡೋನಟ್ ಮೇಲೆ ಸೆಟ್ ಆಗಲು ಸ್ವಲ್ಪ ಸಮಯ ನೀಡಿ.
* ಡೋನಟ್ ಐಸಿಂಗ್ ಗಟ್ಟಿಯಾದ ಬಳಿಕ ಬೇಕರಿಯಲ್ಲಿ ಸಿಗುವಂತಹ ಡೋನಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬ್ರೆಡ್ ಇಲ್ಲದೇ ಮಾಡಿ ರುಚಿರುಚಿಯಾದ ಆಲೂ ಚಿಲ್ಲಾ ಸ್ಯಾಂಡ್ವಿಚ್