ಮಂಗಳೂರು: ನಗರದ ಬಜರಂಗದಳ ಮುಖಂಡ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ.
Advertisement
ಪಣಂಬೂರಿನ ತೋಟ ಬೆಂಗ್ರೆಯ ನಿವಾಸಿ ಜಗದೀಶ್ ಸುವರ್ಣ ಎಂಬವರು ಗುರುವಾರ ಸ್ನೇಹಿತನ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ರು. ಸ್ನೇಹಿತನ ಮನೆಯಿಂದ ಮುಂಜಾನೆ ಮನೆಗೆ ವಾಪಾಸ್ ಆದವರು ಮನೆಗೆ ಮರಳಿ ಬಂದಿರಲಿಲ್ಲ. ಶುಕ್ರವಾರ ಸಂಜೆ ಬೆಂಗ್ರೆ ನದಿಯ ಅಳಿವೆ ಬಾಗಿಲಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಅಂತಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡ್ತಿವೆ.
Advertisement
ಜಗದೀಶ್ ಮನೆಯವರು ನೀಡಿರೋ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ರು ಅನುಮಾನಾಸ್ಪದ ಸಾವು ಅಂತ ಕೇಸ್ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವಷ್ಟೇ ಅಪಘಾತದಿಂದ ಮೃತಪಟ್ಟಿದ್ದಾರೆಯೋ ಅಥವಾ ಕೊಲೆಯೋ ಅಂತ ನಿಜಾಂಶ ಗೊತ್ತಾಗಬೇಕಿದೆ.
Advertisement
Advertisement
ಮೃತ ಜಗದೀಶ್ ಸುವರ್ಣ ನದಿಯಲ್ಲಿ ಪ್ರಯಾಣಿಕರ ಲಾಂಚರ್‍ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ರು. ಮೂಗು, ಬಾಯಲ್ಲಿ ರಕ್ತ ಬಂದಿದ್ದು, ಕೊಲೆ ಅನ್ನೋ ಶಂಕೆ ದಟ್ಟವಾಗಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕವಷ್ಟೇ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.