ಮಂಗಳೂರು: ಭಜರಂಗ ದಳದ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳ ಫೇರ್‌ವೆಲ್ ಪಾರ್ಟಿಗೆ ತಡೆ ಒಡ್ಡಿದ್ದಾರೆ.
ಸೋಮವಾರ ರಾತ್ರಿ ಕಾಲೇಜು ಫೇರ್‌ವೆಲ್ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ
Advertisement
Advertisement
ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ತುಂಡುಡುಗೆ ತೊಟ್ಟು ಫೇರ್‌ವೆಲ್ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದಾರೆ.
Advertisement
Advertisement
ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಮಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳು ಸುದ್ದಿಯಾಗಿದ್ದರು. ಈಗ ಪದವಿ ವಿದ್ಯಾರ್ಥಿಗಳಿಂದ ಪಬ್‍ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಜರಂಗದಳದ ಕಾರ್ಯಕರ್ತರು ಪಬ್‍ಗೆ ನುಗ್ಗಿದ್ದರು.
ನಂತರ ಘಟನೆ ಕುರಿತಂತೆ ಮಾಹಿತಿ ದೊರೆತ ಪೊಲೀಸರು, ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಬಳಿಕ ಅರ್ಧದಲ್ಲಿಯೇ ಪಾರ್ಟಿಯನ್ನು ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಪಬ್‍ನಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ
ಮತ್ತೊಂದೆಡೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ನಟೋರಿಯಸ್ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ. ಧೀರಜ್ ಕುಮಾರ್, ಪ್ರೀತಂ ಪೂಜಾರಿ ಎಂಬ ಇಬ್ಬರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಕೊಲೆ ಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ, ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಇವರಿಬ್ಬರು ಪದೇ ಪದೇ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದರು.