ಲಕ್ನೋ: ಅನ್ಯ ಕೋಮಿನ ಯುವಕರು ಕೋತಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಉತ್ತರ ಪ್ರದೇಶದ ಶಾಮ್ಲಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಕೋತಿಯನ್ನ ಹತ್ಯೆಗೈದಿರುವುದೇ ಕೋಮು ಗಲಭೆಗೆ ಕಾರಣವಾಗಿದೆ.
ಶಾಮ್ಲಿ ಗ್ರಾಮದ ನಿವಾಸಿಗಳಾದ ಆಸೀಫ್, ಹಫೀಜ್ ಮತ್ತು ಅನೀಸ್ ಮೂವರು ಸಹೋದರರು ಕೋತಿಯೊಂದನ್ನ ಗುಂಡಿಕ್ಕಿ ಕೊಂದಿದ್ದರು. ಯುವಕರ ಈ ಕೃತ್ಯ ಭಜರಂಗದಳ ಹಾಗೂ ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ. ಹಿಂದೂ ಧರ್ಮದಲ್ಲಿ ಕೋತಿಯನ್ನು ಆಂಜನೇಯ ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ಕೋತಿಗಳನ್ನು ಹಿಂಸಿಸಲು ಹಾಗೂ ಕೊಲ್ಲಲು ನಮ್ಮ ಅವಕಾಶವಿಲ್ಲ. ಹೀಗಿರುವಾಗ ಈ ಮೂವರು ಅನ್ಯ ಕೋಮಿನ ಯುವಕರು ಬೇಕು ಬೇಕಂತಲೇ ಕೋತಿಯನ್ನು ಕೊಂದು ಕ್ರೌರ್ಯ ಮೆರೆದಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಆಸೀಫ್, ಹಫೀಜ್ ಮತ್ತು ಅನೀಸ್ ಮೂವರು ಕೋತಿಯೊಂದನ್ನು ಸುತ್ತುವರಿದು ನಿಂತಿದ್ದರು. ಅವರಲ್ಲಿ ಓರ್ವ ಯುವಕ ಬಂದೂಕಿನಿಂದ ಕೋತಿಗೆ ಗುಂಡು ಹೊಡೆದಿದ್ದು, ಕೋತಿಯ ಸೊಂಟದ ಭಾಗದಲ್ಲಿ ಗುಂಡು ತಗುಲಿ ಗಾಯಗೊಂಡು ಮೂಕ ಪ್ರಾಣಿ ಪ್ರಾಣ ಬಿಟ್ಟಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಕೋತಿಯ ಮರಣೋತ್ತರ ಪರೀಕ್ಷೆ ಮಾಡಿಸಿ, ಅದರ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
Advertisement
ಇದರ ಜೊತೆಗೆ ಭಜರಂಗದಳದ ಕಾರ್ಯಕರ್ತರು ಸಹ ಯುವಕರ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡಿ. ಇಲ್ಲವಾದರೆ ಕೋತಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದು ಹರಿಹಾಯ್ದಿದ್ದಾರೆ.