ಹೈದರಾಬಾದ್: ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದ ಪಾರ್ಕ್ ನಲ್ಲಿದ್ದ ಯುವಕ-ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್ ನಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ಅಂಗಡಿ, ಪಬ್ ಮತ್ತು ಕಚೇರಿಗಳನ್ನು ಮುಂಚಿತವಾಗಿ ಮುಚ್ಚಿಸಿ ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಹೈದರಾಬಾದಿನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ನೋಡಿದ್ದಾರೆ.
Advertisement
Advertisement
ಕಾರ್ಯಕರ್ತರು ಅವರು ಬಳಿ ಹೋಗಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮದುವೆಯಾಗಿ ಎಂದು ಬಲವಂತದಿಂದ ಯುವಕನಿಂದ ಯುವತಿಗೆ ಅರಿಶಿಣದ ದಾರ ಕಟ್ಟಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಕಾರ್ಯಕರ್ತರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Advertisement
ಹೈದರಾಬಾದ್ ನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಜೋಡಿಯ ಮೇಲೆ ಕಣ್ಣಿಡಲು ರಾಜ್ಯದಾದ್ಯಂತ ಸುಮಾರು 30 ತಂಡಗಳನ್ನು ಕಳುಹಿಸುವ ಯೋಜನೆ ಇದೆ ಎಂದು ಮುಂಚಿತವಾಗಿವೇ ವಿಶ್ವ ಹಿಂದೂ ಪರಿಷತ್ ತಿಳಿಸಿತ್ತು. ಅಷ್ಟೇ ಅಲ್ಲದೇ ಪಾರ್ಕ್, ಶಾಪಿಂಗ್ ಮಳಿಗೆ ಹಾಗೂ ಮುಂತಾದ ಪ್ರತಿದಿನ ಓಡಾಡುವ ಸ್ಥಳಗಳನ್ನು ಹೊರತುಪಡಿಸಿ ಆಫೀಸ್ ಹೊರಗಡೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿತ್ತು.
Advertisement
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆದ್ಕಲ್ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದಂಪತಿ ತಾವು ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ ಎಂದು ಹೇಳಿ ದೂರು ನೀಡಲಿಲ್ಲ. ಆದರೂ ನವದಂಪತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಪಿವಿ ಪದ್ಮಜಾ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv