ನವದೆಹಲಿ: ಬಜಾಜ್ ಆಟೋ ಸಂಸ್ಥೆಯು ದೇಶದ ಜನಪ್ರಿಯ ಸ್ಕೂಟರ್ ಬಜಾಜ್ ಚೇತಕ್ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ರೂಪಿಸಿಕೊಂಡಿದೆ.
ಮಧ್ಯಮ ವರ್ಗದ ಅಂಬಾರಿಯಾಗಿದ್ದ ಬಜಾಜ್ ಚೇತಕ್ ಮತ್ತೊಮ್ಮೆ ನೂತನ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳುತ್ತಿರುವ ನೂತನ `ಬಜಾಜ್ ಚೇತಕ್’ ಪ್ರೀಮಿಯರ್ ಸ್ಕೂಟರ್ ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಆ್ಯಕ್ಟೀವಾ, ಪಿಯಾಜಿಯೋ ವೆಸ್ಪಾ ಮತ್ತು ಎಪ್ರಿಲಿಯಾದ ಎಸ್ಆರ್ 150 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಅಲ್ಲದೇ ನೂತನ ಬಜಾಜ್ ಚೇತಕ್ 2019ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಬಜಾಜ್ ಸಂಸ್ಥೆ ತಿಳಿಸಿದೆ.
Advertisement
ನೂತನ ಬಜಾಜ್ ಚೇತಕ್ ಬೆಲೆಯು ಅಂದಾಜು 70 ಸಾವಿರ ರೂಪಾಯಿಗಳಾಗಿರಲಿದ್ದು, ಹೊಸ ಸ್ಕೂಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಸಂಸ್ಥೆ ಮಾಡಿದೆ. ನೂತನ ಬಜಾಜ್ ಚೇತಕ್ 125 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 9 ರಿಂದ 10 ಬಿಹೆಚ್ ಮತ್ತು 9 ಎನ್‍ಎಮ್ ಟಾರ್ಕ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
Advertisement
Advertisement
ಇಂಜಿನ್ ಅನ್ನು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಮುಂಭಾಗದಲ್ಲಿ ಸಿಂಗಲ್ ಆರ್ಮ್ ಸಸ್ಪೆಂಷನ್, ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅಳವಡಿಸಲಾಗಿದೆ. ಅಲ್ಲದೇ ಸಿಬಿಎಸ್ ಬ್ರೇಕ್ಸ್, ದೊಡ್ಡದಾದ ಫ್ಯುಯಲ್ ಟ್ಯಾಂಕ್, ಒವಲ್ ಶೇಪ್ ಹೆಡ್ ಲ್ಯಾಂಪ್ ಒಳಗೊಂಡಿದ್ದು, ಪ್ರೀಮಿಯಂ ಲುಕ್ ಗಾಗಿ ಅಲ್ಯೂಮಿನಿಯಂ ಗ್ರ್ಯಾಬ್ ರೈಲ್ಸ್ ಅನ್ನು ಹೊಂದಿದೆ. ಅಲ್ಲದೇ ಡಿಜಿಟಲ್ ಮೀಟರ್, ಮೊಬೈಲ್ ಚಾರ್ಜಿಗ್, ಬ್ಲೂಟೂತ್ ಕನೇಕ್ಟಿವಿಟಿ ಹೊಂದಿದೆ.
Advertisement
1972 ರಿಂದ 2006 ರವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆ ಆದ ಕೀರ್ತಿಯನ್ನು ಎಲ್ಲೆಡೆ ಸಾರಿ, ಸ್ಕೂಟರ್ ವಿಭಾಗದಲ್ಲೇ ಹೆಚ್ಚು ಜನಪ್ರಿಯತೆಯನ್ನು ಬಜಾಜ್ ಚೇತಕ್ ಪಡೆದಿತ್ತು. ಭಾರತೀಯ ಯೋಧ ರಾಣಾ ಪ್ರತಾಪ್ ಸಿಂಗ್‍ರ ಪ್ರಸಿದ್ಧ ಕುದುರೆಯ ಹೆಸರನ್ನು ಬಜಾಜ್ ಕಂಪೆನಿ ಈ ಸ್ಕೂಟರ್ ಗೆ ಇಟ್ಟಿತ್ತು. ಅಲ್ಲದೇ ಕೈಗೆಟುಕುವ ಬೆಲೆಯ ಶ್ರೇಣಿಯ ಉನ್ನತ ಗುಣಮಟ್ಟದ ಸ್ಕೂಟರ್ ನಂತೆ ನೋಡಲಾಗುತ್ತಿತ್ತು. ಎಲ್ಲರೂ ಪ್ರೀತಿಯಿಂದ ಇದನ್ನು `ಹಮಾರಾ ಬಜಾಜ್’ ಎಂದು ಕರೆಯುತ್ತಿದ್ದರು.