ಬೆಂಗಳೂರು: ವಿಂಗ್ ಕಮಾಂಡರ್ (Wing Commander) ಮೇಲೆ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಮಾಡಿದ್ದ ವೀಡಿಯೋದಲ್ಲಿ ಅವರ ಹಣೆಯಿಂದ ರಕ್ತ ಸೋರುತ್ತಿತ್ತು. ಯುವಕ ವಿಕಾಸ್ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ (Shiladitya Bose) ಬಿಂಬಿಸಿದ್ದರು. ಆದರೆ ಅಸಲಿ ಕಾರಣವೇ ಬೇರೆ ಇದೆ. ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋಗಿ ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಬರಿಸಿಕೊಂಡಿದ್ದಾರೆ.
ಗಲಾಟೆ ನಡೆದ ಸಂದರ್ಭ ವಿಂಗ್ ಕಮಾಂಡರ್ ಬೈಕ್ ಅನ್ನು ಬೀಳಿಸಿದ್ದಾರೆ. ಈ ವೇಳೆ ವಿಕಾಸ್ ಬೈಕ್ ಕೀಯನ್ನು ಬೈಕಿನಿಂದ ತೆಗೆದು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ರೊಚ್ಚಿಗೆದ್ದ ವಿಂಗ್ ಕಮಾಂಡರ್ ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋದ ಸಂದರ್ಭ ವಿಕಾಸ್ ಕೈಯಲ್ಲಿದ್ದ ಗಾಡಿ ಕೀ ವಿಂಗ್ ಕಮಾಂಡರ್ ಹಣೆಗೆ ತಗುಲಿ ರಕ್ತ ಬಂದಿದೆ. ಇದನ್ನೇ ಸಿಂಪತಿ ವೀಡಿಯೋಗೆ ಬಳಸಿಕೊಂಡ ವಿಂಗ್ ಕಮಾಂಡರ್, ದೇವರು ನನಗೆ ಪವರ್ ಕೊಟ್ಟಿರೋದು ಸೇಡು ತೀರಿಸಿಕೊಳ್ಳಲು ಅಲ್ಲ ಎಂದು ಸುಳ್ಳು ಹೇಳಿದ್ದಾರೆ. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್ ಕಮಾಂಡರ್ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲು
ಭಾಷೆಯ ವಿಚಾರ ಹಾಗೂ ಸ್ಥಳೀಯರು ಯಾರೂ ನನ್ನ ನೆರವಿಗೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ವೀಡಿಯೋ ಮಾಡಿ ಸಿಂಪತಿಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ. ವಿಂಗ್ ಕಮಾಂಡರ್ ಕಾರಿನ ಡ್ಯಾಶ್‌ಕ್ಯಾಮೆರಾ ವೀಡಿಯೋ ಬಿಡುಗಡೆ ಮಾಡದೇ ಹಲ್ಲೆಯ ವೀಡಿಯೋ ಅಷ್ಟೆ ಅಪ್ಲೋಡ್ ಮಾಡಿದ್ದರು. ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬರುತ್ತಿದ್ದಂತೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖವಾಡ ಕಳಚಿದೆ. ಇದನ್ನೂ ಓದಿ: ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು
ವಿಕಾಸ್ ಪಕ್ಕೆಲುಬುಗಳಿಗೆ ವಿಂಗ್ ಕಮಾಂಡರ್ ಕಾಲಿನಿಂದ ಒದ್ದಿರುವ ಹಿನ್ನೆಲೆ ವಿಕಾಸ್ ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಹಲ್ಲೆಗೊಳಗಾದ ವಿಕಾಸ್ ಪರ ಹಲವು ಕನ್ನಡಪರ ಸಂಘಟನೆಗಳು ನಿಂತಿವೆ. ಸೋಮವಾರ ಸಂಜೆಯಿಂದಲೇ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ ವ್ಯಕ್ತವಾಗಿತ್ತು. ವಿಕಾಸ್‌ಗೆ ಕಾನೂನಿನ ನೆರವು ನೀಡಲು ಸಂಘಟನೆಗಳು ಮುಂದಾಗಿವೆ. ಇದೀಗ ವಿಕಾಸ್ ನೀಡಿದ ದೂರನ್ನು ಸ್ವೀಕರಿಸಿದ ಬೈಯಪ್ಪನಹಳ್ಳಿ ಪೊಲೀಸರು ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆಗೆ 1 ವಾರದಿಂದ ಸ್ಕೆಚ್ ಹಾಕಿದ್ದ ಪತ್ನಿ, ಪುತ್ರಿ!