Connect with us

Bengaluru City

ಕೊಲೆ ಹಂತಕನನ್ನ ಬೆನ್ನಟ್ಟಿ ಹಿಡಿದ ಇನ್ಸ್​​ಪೆಕ್ಟರ್

Published

on

ಬೆಂಗಳೂರು: ಕೊಲೆ ಮಾಡಿ ಎಸ್ಕೇಪ್ ಆಗ್ತಿದ್ದ ಹಂತಕನನ್ನ ಪೊಲೀಸ್ ಇನ್ಸ್​​ಪೆಕ್ಟರ್ ಒಬ್ಬರು ಚೇಸ್ ಮಾಡಿ ಹಿಡಿದಿದ್ದಾರೆ.

ಸಿಲಿಕಾನ್ ಸಿಟಿಯ ಬೈಯಪ್ಪನಹಳ್ಳಿಯಲ್ಲಿ ಹಂತಕನನ್ನು ಬಂಧಿಸಲಾಗಿದೆ. ಇಂದು ಸಂಜೆ ಸುಮಾರು 6.40ಕ್ಕೆ ಸದ್ದುಗುಂಟೆಪಾಳ್ಯದ 9ನೇ ಕ್ರಾಸ್ ನ ಮನೆಯಲ್ಲಿ ಕೊಲೆ ನಡೆದಿತ್ತು. ಆಟೊ ಚಾಲಕ ಸಂತೋಷ್ ನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಹೀಗೆ ಆಟೊ ಚಾಲಕನನ್ನ ಕೊಲೆ ಮಾಡಿ ಎಸ್ಕೇಪ್ ಆಗ್ತಿದ್ದ ಆರೋಪಿ ಆನಂದ್ ನನ್ನ ಪೊಲೀಸ್ ಇನ್ಸ್​​ಪೆಕ್ಟರ್ ಮೊಹಮದ್ ರಫಿ ಬೆನ್ನಟ್ಟಿ ಹಿಡಿದಿದ್ದಾರೆ.

ಮಾತುಕತೆಗೆ ಅಂತಾ ತೆರಳಿ ಕೊಲೆ ಮಾಡಿದ್ದ ಆನಂದ್ ನಾಲ್ಕನೇ ಫ್ಲೋರ್ ನಿಂದ ಕೆಳಗೆ ಇಳಿದು ಬಂದಿದ್ದಾನೆ. ಅಲ್ಲೇ ರೌಂಡ್ಸ್ ನಲ್ಲಿದ್ದ ಇನ್ಸ್​​ಪೆಕ್ಟರ್ ಮೊಹಮದ್ ರಫಿ ಈತನ ರಕ್ತ ಸಿಕ್ತವಾದ ಬಟ್ಟೆಗಳನ್ನ ನೋಡಿ ಚೇಸ್ ಮಾಡಿ ಹಿಡಿದಿದ್ದಾರೆ. ಸದ್ಯ ಕೊಲೆಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *