ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ತನಿಖೆ ಶುರು ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ (Baisaran) ಪ್ರವಾಸಿಗರಿಗಾಗಿ ರೀಲ್ಸ್ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೌದು. ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್ ಅಫ್ರಿದಿ
ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಂತೆ ಭಯಕ್ಕೆ ಮರ ಏರಿದ್ದ ರೀಲ್ಸ್ ವಿಡಿಯೋ ಗ್ರಾಫರ್ ಇಡೀ ಕೃತ್ಯವನ್ನು ಮರದ ಮೇಲೆ ಕುಳಿತುಕೊಂಡೆ ಸೆರೆ ಹಿಡಿಯುತ್ತಿದ್ದರು. ಇದೀಗ ಎನ್‌ಐಎಗೆ ಆ ವಿಡಿಯೋ ಗ್ರಾಫರ್ (Reels Videographer) ಪ್ರಮುಖ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾ ಇರ್ತಾರೆ ಹೋಗ್ತಾರೆ, ಆದ್ರೆ ನಮ್ಗೆ ದೇಶ ರಕ್ಷಣೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ
ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ:
ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು. ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ವಿಚಾರಣೆ
ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಐಎ ತಂಡ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಉಗ್ರರ ಕ್ರಿಯಾಯೋಜನೆಯ ಬಗ್ಗೆ ಸುಳಿವು ಪಡೆಯಲು ಎಂಟ್ರಿ, ಎಕ್ಸಿಟ್ ಸ್ಥಳಗಳನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆದು: ಜಗದೀಶ್ ಶೆಟ್ಟರ್