ಹುಬ್ಬಳ್ಳಿ: ಹೈಕೋರ್ಟ್ (High Court) ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ (Hubli) ಭೈರಿದೇವರಕೊಪ್ಪ ದರ್ಗಾದ (Bairidevarkoppa Dargah) ತೆರವು ಕಾರ್ಯಾಚರಣೆ ಆರಂಭವಾಗಿದೆ.
ಭೈರಿದೇವರಕೊಪ್ಪದ ದರ್ಗಾವು ಹುಬ್ಬಳ್ಳಿ – ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿದೆ. ಆದರೆ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್‍ನಿಂದ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ತೆರವು ಕಾರ್ಯಾಚರಣೆ ಬೆಳ್ಳಂಬೆಳಗ್ಗೆ ಆರಂಭವಾಗಿದೆ.
ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಹುಬ್ಬಳ್ಳಿಯಿಂದ ಧಾರವಾಡ ಸಂಪರ್ಕಿಸುವ 500 ಮೀಟರ್ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯರಸ್ತೆಗೆ ಬ್ಯಾರಿಕೇಡ್ ಇಟ್ಟು ತೆರವು ಕಾರ್ಯ ಆರಂಭಿಸಿದ್ದು, ಭದ್ರತೆಗಾಗಿ 5 ಡಿವೈಎಸ್‍ಪಿ ಅಥವಾ ಎಸಿಪಿ, 13 ಪಿಐ, 15 ಪಿಎಸ್‍ಐ, 250 ಕಾನ್ಸ್‌ಟೇಬಲ್ ಹಾಗೂ ಆರ್‌ಎಎಫ್, ಕೆಎಸ್‍ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸಮುದಾಯ, ಆರ್ಥಿಕ ಅಭಿವೃದ್ಧಿಗೆ ಸಾಕ್ಷರತೆಯ ಪಾತ್ರ ಪ್ರಮುಖ – ಗೆಹ್ಲೋಟ್
ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮದಲ್ಲಿ ನಿರ್ಬಂಧಿಸಲಾಗಿದೆ. ದರ್ಗಾ ಸುತ್ತ ತಗಡು ಜೋಡಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?