ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಪತಿ, ನಿರ್ಮಾಪಕ ರವೀಂದರ್ ಚಂದ್ರಶೇಖರ್ ಕೊನೆಗೂ ಜೈಲಿನಿಂದ ಹೊರ ಬಂದಿದ್ದಾರೆ. ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಪತಿಯು ಜೈಲಿನಲ್ಲಿದ್ದಾಗ ತನಗೆ ಮೋಸವಾಗಿದೆ, ರವೀಂದರ್ ತನಗೆ ಮೋಸ ಮಾಡಿದ್ದಾರೆ ಎಂದು ಬಡಬಡಿಸಿದ್ದ ಮಹಾಲಕ್ಷ್ಮಿ, ಪತಿಯು ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ್ದಾರೆ.
Advertisement
ಪತಿ ಜೈಲಿಗೆ ಹೋಗಿದ್ದಾಗ ಮಹಾಲಕ್ಷ್ಮಿ ಮಾಡಿದ್ದೇನು?
Advertisement
ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಅವರು ತಮ್ಮ ಪತಿ, ನಿರ್ಮಾಪಕ ರವೀಂದ್ರ ಬಗ್ಗೆ ಗುರುತರ ಆರೋಪ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಹಣದ ವಂಚನೆ ಪ್ರಕರಣದಲ್ಲಿ ಜೈಲು (Jail) ಪಾಲಾಗಿರುವ ರವೀಂದ್ರ ಅವರಿಗೆ ಜಾಮೀನು ಸಿಗುವುದು ಕಷ್ಟವಾಗಿತ್ತು. ಹಾಗಂತ ಮಹಾಲಕ್ಷ್ಮಿ ಬೇಸರದಲ್ಲೂ ಇಲ್ಲ. ದಿನಕ್ಕೊಂದು ಫೋಟೋಶೂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ, ಟ್ರೋಲ್ ಆಗುತ್ತಿದ್ದರು.
Advertisement
Advertisement
ಈ ನಡುವೆ ಮಹಾಲಕ್ಷ್ಮಿ ಅವರೇ ಆಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಮದುವೆ ಆಗುವಾಗ ತನ್ನ ಗಂಡ ಸಾಲ ಮಾಡಿರುವ ಮತ್ತು ಅವರಿಗೆ ಮೋಸ ಮಾಡಿರುವ ಯಾವುದೇ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿಲ್ಲ. ಅವರು ನನಗೆ ಮೋಸ ಮಾಡಿ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾದ ಮಾತುಗಳು ಹರಿದಾಡಿದವು. ಈ ಮಾತುಗಳು ಸಖತ್ ಸುದ್ದಿ ಆಗಿದ್ದರೂ, ಮಹಾಲಕ್ಷ್ಮಿ ಮಾತ್ರ ಇದು ನಿಜನಾ ಅಥವಾ ಸುಳ್ಳಾ ಎಂದು ಸ್ಪಷ್ಟ ಪಡಿಸಲಿಲ್ಲ.
ಇತ್ತೀಚೆಗಷ್ಟೇ ರವೀಂದ್ರ (Ravindar Chandrasekaran), ಮಹಾಲಕ್ಷ್ಮಿ (Mahalakshmi) ಜೋಡಿಯು ಮೊದಲ ಮದುವೆ ವಾರ್ಷಿಕೋತ್ಸವ ಪೂರೈಸಿದ್ದರು. ಈ ಬೆನ್ನಲ್ಲೇ ವಂಚನೆ ಪ್ರಕರಣವೊಂದರಲ್ಲಿ ರವೀಂದ್ರ ಜೈಲು ಪಾಲಾದ್ರು. ಗಂಡ ಜೈಲು ಸೇರಿದ್ರೆ, ಹೆಂಡತಿ ಮಹಾಲಕ್ಷ್ಮಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದರು. ನಟಿಯ ನಡೆಗೆ ನೆಟ್ಟಿಗರು ಕಾಲೆಳೆದಿದ್ದರು.
ಲೈಟ್ ಬಣ್ಣ ಸೀರೆಯಲ್ಲಿ ಮತ್ತೊಂದು ಹಳದಿ ಬಣ್ಣದ ಸೀರೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿ ಮಿಂಚಿದ್ದರು. ಬಗೆ ಬಗೆಯ ಭಂಗಿಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದರು. ಗಂಡ ಜೈಲಿನಲ್ಲಿದ್ರೆ ನೀವು ಫೋಟೋ ತೆಗೆಸಿ ಮೋಜು ಮಾಡ್ತೀರಾ ಅಂತಾ ಬಗೆ ಬಗೆಯ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದಿದ್ದವು.
ರವೀಂದ್ರ ಚಂದ್ರಶೇಖರ್ ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಸೆ.8ರಂದು ಬಂಧಿಸಿದ್ದರು. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದರು.
ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಕಾಪಾ (Balaji,) ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ತಮ್ಮ ಲಿಬ್ರಾ ಪ್ರೋಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.
Web Stories