ಹಾಸನ: ಕೆಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೇವಣ್ಣ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಹಿತಿ ಸಿಗುತ್ತಿದ್ದಂತೆ ಹಾಸನ, ಹೊಳೆನರಸೀಪುರದಲ್ಲಿ ಸಂಭ್ರಮ ಮನೆ ಮಾಡಿತ್ತು. ರಸ್ತೆಗಿಳಿದ ರೇವಣ್ಣ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
Advertisement
ಹೊಳೆನರಸೀಪುರದಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ಮಾಜಿ ಸಚಿವ ಕೆಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದದಲ್ಲಿ ಬಂಧನಕ್ಕೆ ಒಳಗಾಗಿದ್ದರು. ನಿನ್ನೆ ಇಡೀ ದಿನ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಿತು ಬಳಿಕ ರೇವಣ್ಣಗೆ (HD Revanna Bail) ಜಾಮೀನು ನೀಡಲಾಯ್ತು. ರೇವಣ್ಣಗೆ ಜಾಮೀನು ಸಿಗಲಿ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ರೇವಣ್ಣ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಹೊಳೆನರಸೀಪುರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
Advertisement
Advertisement
ಇದೇ ವೇಳೆ ಮಹಾತ್ಮಾಗಾಂಧಿ ವೃತ್ತಕ್ಕೆ ಆಗಮಿಸಿದ ಪೊಲೀಸರು ಪಟಾಕಿ ಸಿಡಿಸಿದ ಓರ್ವನನ್ನು ವಶಕ್ಕೆ ಪಡೆದ ಕಾರಣ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡವೆ ವಾಗ್ವಾದ ನಡೆಯಿತು. ಕಾಂಗ್ರೆಸ್‍ನವರಿಗೆ ಅನುಮತಿ ನೀಡಿದ್ದೀರಾ ನಮಗೂ ಅನುಮತಿ ಕೊಡಿ ಅಂತಾ ರೇವಣ್ಣ ಅಭಿಮಾನಿಗಳು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಪೊಲೀಸರು ಅನುಮತಿ ನೀಡುತ್ತಿದ್ದಂತೆ ಪಟಾಕಿ ಸಿಡಿಸಿದ ಅಭಿಮಾನಿಗಳು, ಜೆಡಿಎಸ್ (JDS) ಕಾರ್ಯಕರ್ತರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ರೇವಣ್ಣ ಪರ ಘೋಷಣೆ ಕೂಗಿದ್ರು. ಇದನ್ನೂ ಓದಿ: ಇಂದು ಜೈಲಿನಿಂದ ರಿಲೀಸ್ ಆಗಲಿದ್ದಾರೆ ರೇವಣ್ಣ
Advertisement
ಹೊಳೆನರಸೀಪುರ ಕ್ಷೇತ್ರದಲ್ಲಿ ಯಾರು ಮಾಡದ ಅಭಿವೃದ್ದಿಯನ್ನು ನಮ್ಮ ರೇವಣ್ಣ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಆದರೆ ರೇವಣ್ಣ ಅವರನ್ನು ಬಂಧಿಸಿದ್ದು ತಪ್ಪು. ರಾಜಕೀಯ ಷಡ್ಯಂತ್ರದಿಂದ ನಮ್ಮ ರೇವಣ್ಣ ಅವರನ್ನು ಬಂಧಿಸಲಾಗಿದೆ. ರೇವಣ್ಣ ಅವರು ಹೊಳೆನರಸೀಪುರಕ್ಕೆ ಬರ್ತಿದ್ದಂತೆ ಗಾಂಧಿ ವೃತದಲ್ಲಿ ಹಾಲಿನ ಅಭಿಷೇಕ ಮಾಡುವ ಮೂಲಕ ಅವರ ಮೇಲೆ ಬಂದ ಕಳಂಕವನ್ನು ದೂರ ಮಾಡುತ್ತೇವೆ ಎಂದರು. ನಮ್ಮ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸವನ್ನು ಮರೆಯಲ್ಲ. ರೇವಣ್ಣಗೆ ಜಾಮೀನು ಸಿಕ್ಕಿರೋದ್ರಿಂದ ಹೊಳೆನರಸೀಪುರದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ ಅಂತ ಅಭಿಮಾನಿಗಳು ಭಾವುಕರಾದರು.
ಹೊಳೆನರಸೀಪುರ ಅಲ್ಲದೆ, ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಾಗೂ ಹಾಸನ ನಗರದ ಡೈರಿ ವೃತ್ತದಲ್ಲಿ ಪಟಾಕಿ ಸಿಡಿಸಿದ ಎಚ್.ಡಿ.ರೇವಣ್ಣ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ರೇವಣ್ಣಗೆ ಜಾಮೀನು ಸಿಕ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಜೆಡಿಎಸ್‍ನಲ್ಲಿ ಮತ್ತ ಹುಮ್ಮಸ್ಸು ಮರಳಿದ್ದು, ರೇವಣ್ಣ ಅವರನ್ನು ಸ್ವಾಗತ ಮಾಡಲು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.