ಕಲಬುರಗಿ: ಸೂಫಿ ಸಂತರ ನಾಡು ಎಂದೇ ಖ್ಯಾತಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ.
ಮಾರ್ಚ್ 6ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಉತ್ಸವ ನಡೆಯುತಿದ್ದು ಇದಕ್ಕೆ ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
Advertisement
Advertisement
ಬಹುಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದು ಅಂತಾ ಹೋರಾಟಗಾರರು ಆಗ್ರಹಿಸಿದ್ದಾರೆ.
Advertisement
ಶತಾಯಗತಾಯ ಬಹುಮನಿ ಹೆಸರಿನಲ್ಲಿಯೆ ಉತ್ಸವ ಮಾಡಲು ಕೈ ನಾಯಕರು ನಿರ್ಧರಿಸಿದ್ದು, ಮಾರ್ಚ್ 6ರಂದು ಖವಾಲಿ ಸೇರಿದಂತೆ ಬಹುಮನಿ ಸುಲ್ತಾನರ ಸಂಸ್ಕೃತಿ ಅನಾವರಣಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಕಲಬುರಗಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆಯೋಜಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯಾರೆ ಏನು ಹೇಳಿದ್ರು ಉತ್ಸವ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದಾರೆ.