ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

Public TV
2 Min Read
Bahukrita Vesham

ಬೆಂಗಳೂರು: ಕಿರುತೆರೆಯ ನಟ-ನಟಿಯರು ಚಂದನವನದತ್ತ ಮುಖ ಮಾಡೋದು ಕಾಮನ್. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಸಂಖ್ಯೆ ಬಹುಪಾಲು ಹೆಚ್ಚಾಗಿದೆ. ಕಿರುತೆರೆಯಲ್ಲಿ ಜನರ ಮನೆ ಮನಸ್ಸುಗಳಲ್ಲಿ ಬೇರೂರುವ ಮೂಲಕ ಬೆಳ್ಳಿ ಪರೆದೆ ಮೇಲೆ ಪ್ರಯೋಗಕ್ಕೆ ಮುಂದಾಗಿಗುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ನಟ ಸೇಪರ್ಡೆಯಾಗಿದ್ದಾರೆ. ಅವರೇ ಕುಲವಧು ಧಾರಾವಾಹಿ ಖ್ಯಾತಿಯ ಖಳನಟ ಶಶಿಕಾಂತ್.

Bahukrita Vesham 1

‘ಬಹುಕೃತ ವೇಷಂ’ ಸಿನಿಮಾ ಮೂಲಕ ನಾಯಕ ನಟನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯ ಖಡಕ್ ಖಳನಟ ಶಶಿಕಾಂತ್. ಖಾಸಗಿ ವಾಹಿನಿಯ ಕುಲವಧು ಧಾರಾವಾಹಿಯಲ್ಲಿ ವಿಲನ್ ರೋಲ್ ನಲ್ಲಿ ಜನಮನ್ನಣೆ ಪಡೆದ ಶಶಿಕಾಂತ್ ನಾಯಕನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗಂತ ಇದೇನು ಇವರ ಮೊದಲ ಸಿನಿಮಾವಲ್ಲ. ಇದಕ್ಕೂ ಮುನ್ನ ರಣರಣಕ, ಗೌಡ್ರು ಸೈಕಲ್ ಸಿನಿಮಾಗಳಲ್ಲಿ ನಟನಾಗಿ ಭರವಸೆ ಮೂಡಿಸಿದ್ದಾರೆ. ಇದೀಗ ‘ಬಹುಕೃತ ವೇಷಂ’ ಸಿನಿಮಾ ಮೂಲಕ ಮತ್ತೊಮ್ಮೆ ಸೌಂಡ್ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಒಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿದೆ.

Bahukrita Vesham 4

ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮುಖವಾಡ ಹಾಕುತ್ತಾರೆ. ಹಾಗೆಯೇ ಪ್ರೀತಿಯನ್ನು ಪಡೆಯಲು ಮುಖವಾಡ ಹಾಕಬೇಕಾಗುತ್ತೆ. ಇದನ್ನೇ ಚಿತ್ರದ ಎಳೆಯಾಗಿಟ್ಟುಕೊಂಡು ಚೆಂದದ ಪ್ರೇಮ್ ಕಹಾನಿ ಹೆಣೆದಿದ್ದಾರೆ ಅಧ್ಯಾಯ್ ತೇಜ್. ಚಿತ್ರಕಥೆ ಕೂಡ ಇವರದ್ದೇ. ಕ್ಯೂಟ್ ಲವ್ ಸ್ಟೋರಿ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ಪ್ರಶಾಂತ್ ಯಲ್ಲಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ನಟಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ನಟಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

Bahukrita Vesham 5

ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿರುವ ಶಶಿಕಾಂತ್ ಬೆಳ್ಳಿಪರದೆ ಮೇಲೆ ತಮ್ಮದೇ ಛಾಪನ್ನು ಒತ್ತಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಹಾಗಂತ ಇಲ್ಲಿವರೆಗೆ ನಡೆದುಬಂದ ಸುಲಭದಲ್ಲ. ಮೂಲತಃ ಮಂಡ್ಯದವರಾದ ಶಶಿಕಾಂತ್ ರೈತ ಕುಟುಂಬದವರು. ಬಿಎಸ್ಸಿ ಓದಿಕೊಂಡಿರುವ ಶಶಿಕಾಂತ್ ಗೆ ಕಾಲೇಜು ದಿನಗಳಿಂದ ರಂಗಭೂಮಿ ನಂಟು. ಆಗಲೇ ನಟನಾಗಬೇಕು ಎಂದು ಕನಸು ಕಂಡವರು. ಬಿಎಸ್‍ಸಿ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬಂದ ಶಶಿಕಾಂತ್ ಪ್ರೊಫೇಶನ್ ಬಿಟ್ಟು ಆಯ್ಕೆ ಮಾಡಿಕೊಂಡಿದ್ದು ಫ್ಯಾಶನ್. ಬೆಂಗಳೂರಿಗೆ ಬಂದವರೇ ಸೀದಾ ರಂಗಭೂಮಿ ತಂಡ ಸೇರಿ ನಟನೆಗೆ ಬೇಕಾದ ಕಸರತ್ತುಗಳನ್ನು ಕಲಿತುಕೊಂಡ್ರು. ಬಣ್ಣದ ಲೋಕದಲ್ಲಿ ಅವಕಾಶ ಪಡೆಯಲು ಅಲೆದಾಟ ನಡೆಸುತ್ತಿರುವಾಗ ಸಿಕ್ಕಿದ್ದು ಕಿರುತೆರೆಯ ಅವಕಾಶ. ಮೀರಾ ಮಾಧವ, ಖುಷಿ, ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ, ಕುಲವಧು ಮುಂತಾದ ಧಾರಾವಾಹಿಗಳಲ್ಲಿ ಶಶಿಕಾಂತ್ ನಟಿಸಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

ನಟಿಸಿದ ಎಲ್ಲಾ ಧಾರಾವಾಹಿಗಳಲ್ಲಿ ರಗಡ್ ವಿಲನ್ ಪಾತ್ರಗಳಲ್ಲೇ ಮಿಂಚಿದ ಶಶಿಕಾಂತ್ ರಣರಣಕ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ರು. ಇದೀಗ ಬಣ್ಣದ ಲೋಕದಲ್ಲೇ ಬದುಕುಕಟ್ಟಿಕೊಳ್ಳಲು ಮುಂದಾಗಿರುವ ಶಶಿಕಾಂತ್ ಗೆ ಹಲವು ಸಿನಿಮಾ ಆಫರ್ ಗಳು ಒಲಿದು ಬರುತ್ತಿದೆ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

Share This Article
Leave a Comment

Leave a Reply

Your email address will not be published. Required fields are marked *