ಹೈದರಾಬಾದ್: ಸತ್ಯರಾಜ್ ಅವರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ಮೇಲಿನ ಸಿಟ್ಟನ್ನು ಬಾಹುಬಲಿ ಸಿನಿಮಾದ ಮೇಲೆ ತೋರಿಸುವುದು ಸರಿಯಲ್ಲ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಕರ್ನಾಟಕದ ಜನತೆಯಲ್ಲಿ ಕನ್ನಡದಲ್ಲಿ ಕೇಳಿಕೊಂಡಿದ್ದಾರೆ.
ಬಾಹುಬಲಿ- ಬಿಡುಗಡೆಗೆ ಕನ್ನಡ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಸತ್ಯರಾಜ್ ಅವರು ಬಾಹುಬಲಿಯ ನಿರ್ದೇಶಕರು, ನಿರ್ಮಾಪಕರು ಅಲ್ಲ, ಅವರು ಒಬ್ಬರು ಕಲಾವಿದರು. ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ಈ ಹಿಂದೆ ಅವರು ಅಭಿನಯಿಸಿದ ಚಿತ್ರಗಳು ಬಿಡುಗಡೆಯಾಗಿದೆ. ಹೀಗಾಗಿ ಅವರ ಹೇಳಿಕೆಗೂ ಬಾಹುಬಲಿಗೂ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ ಎಂದು ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ.
Advertisement
ಈ ಹಿಂದೆ ಬಾಹುಬಲಿ ಒಂದು ಬಿಡುಗಡೆಯಾದಾಗ ಹೇಗೆ ನಮ್ಮನ್ನು ಪ್ರೋತ್ಸಾಹಿಸಿದ್ದೀರೋ ಅದೇ ರೀತಿಯಾಗಿ ಈ ಬಾರಿಯೂ ನಮ್ಮನ್ನು ಪ್ರೋತ್ಸಾಹಿಸಿ. ಈ ವಿಚಾರದ ಬಗ್ಗೆ ನಾವು ಸತ್ಯರಾಜ್ ಅವರ ಬಳಿ ತಿಳಿಸಿದ್ದೇವೆ. ನಮಗೆ ಸಂಬಂಧ ಇಲ್ಲದ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ ಎಂದು ಅವರು ಕನ್ನಡಿಗರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.