ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಈಗಾಗಲೇ ಬಯೋಪಿಕ್‌ವೊಂದು ಬಂದಿದೆ. ಆದರೆ ಈಗ ಮತ್ತೊಮ್ಮೆ ಮೋದಿ ಅವರ ಜೀವನ ಕಥೆಯನ್ನು ತೆರೆಯ ಮೇಲೆ ತೋರಿಸಲು ತಯಾರಿ ನಡೆಯುತ್ತಿದೆ. ಪಿಎಂ ನರೇಂದ್ರ ಮೋದಿ ಪಾತ್ರದಲ್ಲಿ ತಮಿಳಿನ ನಟ ಸತ್ಯರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್ ಬಳಿಕ ಸೌತ್‌ನಲ್ಲಿ ಮತ್ತೊಮ್ಮೆ ಸಿನಿಮಾ ಮಾಡಿ ತೋರಿಸಲು ಚಿತ್ರತಂಡ ಸಜ್ಜಾಗಿದ್ದಾರೆ. ಈ ಬಾರಿ ಸಿ.ಎಚ್ ಕ್ರಾಂತಿ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ‘ಬಾಹುಬಲಿ’ (Bahubali) ಕಟ್ಟಪ್ಪ ಪಾತ್ರದಲ್ಲಿ ನಟಿಸಿದ್ದ ಸತ್ಯರಾಜ್ (Sathyaraj) ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲು ಆಫರ್ ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ
ಈಗಾಗಲೇ ಸೌತ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವ ಸತ್ಯರಾಜ್ ಜೊತೆ ಚಿತ್ರತಂಡ ಸಂಪರ್ಕಿಸಿದೆ. ಸಿನಿಮಾ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ. ಆದರೆ ಪಿಎಂ ಪಾತ್ರದಲ್ಲಿ ನಟಿಸಲು ಸತ್ಯರಾಜ್ ಒಪ್ಪಿಗೆ ನೀಡಿದ್ರಾ? ಎಂಬುದು ತಿಳಿದು ಬಂದಿಲ್ಲ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.
ಪಿಎಂ ಬಯೋಪಿಕ್ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಈ ಹಿಂದೆ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪಾತ್ರವನ್ನು ಮಾಡಿ ಸತ್ಯರಾಜ್ ಸೈ ಎನಿಸಿಕೊಂಡಿದ್ದರು. ಅವರ ನಟನೆಗೆ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಹಾಗಾಗಿ ಪಿಎಂ ಪಾತ್ರಕ್ಕೂ ಇವರೇ ಸೂಕ್ತ ಅಂತ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ.