ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ (Sikandar Film) ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ಗೆ (Salman Khan) ಯಶಸ್ಸು ಬೇಕಾಗಿದೆ. ಹಾಗಾಗಿ ದಕ್ಷಿಣದ ತಾರೆಯರಿಗೆ ಚಿತ್ರತಂಡ ಮಣೆ ಹಾಕುತ್ತಿದೆ. ಇದೀಗ ಸಲ್ಮಾನ್‌ಗೆ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ.
ವಿಲನ್ ಖಡಕ್ ಆಗಿ ಇದ್ದರೆ ತಾನೇ ಹೀರೋಗೆ ಬೆಲೆ. ಅದಕ್ಕಾಗಿ ಸಲ್ಮಾನ್ ಖಾನ್ ಎದುರು ಅಬ್ಬರಿಸಲು ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಸೂಕ್ತ ಎನಿಸಿ ‘ಸಿಖಂದರ್’ ತಂಡ ಅವರನ್ನು ಸಂಪರ್ಕಿಸಿದೆ. ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಆದರೆ ಚಿತ್ರತಂಡ ಅಧಿಕೃತ ಘೋಷಣೆ ಆಗಬೇಕಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ
‘ಸಿಖಂದರ್’ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಸಾಜಿದ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸುತ್ತಿರೋದ್ರಿಂದ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.