-ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ
ಹಾಸನ: ಜಿಲ್ಲೆಯ ಜನ ಜೆಡಿಎಸ್‍ನಿಂದ ಸ್ವಾತಂತ್ರ್ಯ ಪಡೆಯಬೇಕಿದ್ದು, ಅದರಲ್ಲೂ ಹೊಳೆನರಸೀಪುರ ಕ್ಷೇತ್ರದ ಜನರಿಗೆ ಹೆಚ್.ಡಿ ರೇವಣ್ಣ ಶಾಸಕರಾದ ಬಳಿಕ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಕಿಡಿಕಾರಿದ್ದಾರೆ.
Advertisement
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ, ಹೆಚ್‍ಡಿಕೆ ಹೇಳಿಕೆ ವಿರೋಧಿಸಿ, ನಾನು ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದರಿಂದ ಇದನ್ನು ಹೇಳುತ್ತಿದ್ದೇನೆ. ಅಲ್ಲಿಯ ಜನ ಹೆದರಿಕೊಂಡಿರೋದು ನಿಜ. ಈ ಹಿಂದೆ ಆ ಕ್ಷೇತ್ರದ ಸಚಿವರಾಗಿದ್ದ ಎಂಬಿ.ಪಾಟೀಲ್ ಬಳಿ ಹೋಗಿದ್ದೇವು. ರೇವಣ್ಣ ವಿರುದ್ಧ ಯಾರು ಮಾತನಾಡುತ್ತಾರೆ ಅವರ ಮೇಲೆ ರೌಡಿಶೀಟರ್ ಕೇಸ್ ಹಾಕಿಸುತ್ತಿದ್ದಾರೆ ಅದನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದೇವು. ಆಗ ಎಂಬಿ.ಪಾಟೀಲ್ ಎಸ್‍ಪಿಗೆ ಫೋನ್ ಮಾಡಿ ಆ ರೀತಿ ಮಾಡಬೇಡಿ ಎಂದಿದ್ದರು ಆದರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ – ಎಚ್‌ಡಿಕೆಯ ದ್ವಿಪತ್ನಿತ್ನ ವಿಚಾರ ಪ್ರಸ್ತಾಪಿಸಿ ಕಾಲೆಳೆದ ಬಿಜೆಪಿ
Advertisement
ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ. ಇದನ್ನು ನಾನು ಅಭ್ಯರ್ಥಿಯಾಗಿದ್ದಾಗ ಅನುಭವಿಸಿದ್ದೇನೆ. ಸುಮಾರು 70 ಹಳ್ಳಿಗಳಲ್ಲಿ ಯಾವ ಪೊಲೀಸರು ಬರಲ್ಲ. ಈ ಬಗ್ಗೆ ಯಾವ ಎಲೆಕ್ಷನ್ ಕಮಿಟಿಗೆ ದೂರು ಕೊಟ್ಟರೂ ಏನು ಆಗಲ್ಲ. ಜೆಡಿಎಸ್ ಪಕ್ಷದವರು ಜನ ಯಾರಿಗೆ ವೋಟ್ ಹಾಕ್ತಾರೆ ಎಂದು ಬೂತ್ ಬಳಿ ನಿಂತು ನೋಡುತ್ತಾರೆ. ಹೀಗಾಗಿ ಜನ ತಮಗೆ ಬೇಕಾದವರಿಗೆ ವೋಟ್ ಹಾಕಲು ಹೆದರುತ್ತಾರೆ. ಈ ಪರಿಸ್ಥಿರಿ ಸರಿಯಾಗಬೇಕಾದರೆ ನಮ್ಮ ಕಾಂಗ್ರೆಸ್ ರಾಜ್ಯ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಾಗೂರು ಮಂಜೇಗೌಡ ಸೋಲನುಭವಿಸಿದ್ದರು. ಆ ಬಳಿಕ ಇದೀಗ ರೇವಣ್ಣ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ