ಬೆಂಗಳೂರು: ಭಾಗಮತಿ ಎಕ್ಸ್‌ಪ್ರೆಸ್ ರೈಲು ಅಪಘಾತ (Bagmati Express Train Accident) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಿಂದ ಹತ್ತಿರುವ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ (Passengers) ರಾತ್ರಿಯೇ ರೈಲ್ವೆ ಅಧಿಕಾರಿಗಳು (Railway officials) ಕರೆ ಮಾಡಿ ವಿಚಾರಿಸಿದ್ದಾರೆ.
ಬೆಂಗಳೂರು ವಲಯ, ಮೈಸೂರು ವಲಯದಿಂದ ಬೋರ್ಡಿಂಗ್ ಆಗಿರುವ ಎಲ್ಲಾ ಪ್ರಯಾಣಿಕರಿಗೆ ಕರೆ ಹೋಗಿದೆ. ಒಂದು ಸಾವಿರ ಪ್ರಯಾಣಿಕರ ಪೈಕಿ 60% ಮಂದಿ ಕರೆ ಸ್ವೀಕರಿಸಿದ್ದರೆ 40% ಜನ ಕರೆ ಸ್ವೀಕರಿಸಿಲ್ಲ. ಕರೆ ಸ್ವೀಕರಿಸದವರು ಸೇಫಾಗಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: Bagmati Express Train Accident | ರೈಲು ಅಪಘಾತ ಹೇಗಾಯ್ತು? ದೋಷ ಯಾರದ್ದು?
Advertisement
Advertisement
ಕಾಲ್ ರಿಸೀವ್ ಮಾಡಿದ ಪ್ರಯಾಣಿಕರು ಹಲವು ಸಮಸ್ಯೆ ಹೇಳಿಕೊಂಡಿದ್ದಾರೆ. ನಮ್ಮ ಲಗೇಜ್ ಮಿಸ್ ಆಗಿದೆ. ಲಗೇಜ್ ವ್ಯವಸ್ಥೆ ಮಾಡಿಕೊಡಿ. ನಮಗೆ ಬೇರೆ ರೈಲು ಸಿಗುತ್ತಾ ಏನು ಮಾಡಬೇಕು ಅಂತಾ ಪ್ರಶ್ನೆ ಮಾಡಿದ್ದಾರೆ. ಒಂದು ಗುಂಪು ಆರೇಳು ಜನರಿಗೆ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
Advertisement
ರೈಲು ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಪ್ರಯಾಣಿಕರನ್ನೂ ಮೆಮು ರೈಲಿನ ಮೂಲಕ ಶಿಫ್ಟ್ ಮಾಡಲಾಗಿದೆ. ಶನಿವಾರ ಪ್ರಯಾಣಿಕರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುತ್ತದೆ. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದರು.
Advertisement
ಮೈಸೂರಿನಿಂದ ಬಿಹಾರದ ದರ್ಬಾಂಗ್‌ಗೆ ಹೊರಟಿದ್ದ ಬಾಗಮತಿ ಎಕ್ಸ್‌ಪ್ರೆಸ್ ರೈಲು (Mysuru-Darbhanga Bagmati Express) ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಕವರಪೆಟ್ಟೈ ನಿಲ್ದಾಣದ ಬಳಿಕ ಲೂಪ್ ಲೈನಿಗೆ ಪ್ರವೇಶ ಪಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.