ಭೋಪಾಲ್: ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತೆ ಇಲ್ಲದ ಕಾರಣ ಇಲ್ಲಿ ದಂಪತಿಯೊಬ್ಬರು ಮಗು ಹೆರುವುದೇ ಬೇಡವೆಂದು ದೃಢನಿರ್ಧಾರ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ 7 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಸುದ್ದಿಯನ್ನು ಕೇಳಿ ಭಯಗ್ರಸ್ಥರಾಗಿರುವ ಸುಭಾಷ್ ಚಂದ್ರ ಕಶ್ಯಪ್ ಹಾಗೂ ಅವರ ಪತ್ನಿ ತಾವು ಮಕ್ಕಳನ್ನೇ ಹೆರುವುದು ಬೇಡವೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
Advertisement
Advertisement
ಸುಭಾಷ್ ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಆದರೆ ಈ ದಂಪತಿ ತಮಗೆ ಹೆಣ್ಣು ಮಗು ಆದರೆ ಆ ಮಗುವಿನ ಸುರಕ್ಷತೆ ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಸುತ್ತಮುತ್ತಲೂ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲುವವರೆಗೂ ಹಾಗೂ ಈ ಕುರಿತಂತೆ ಸರ್ಕಾರ ಜನರಿಗೆ ಅಭಯ ಕೊಡುವವರೆಗೂ ನಮಗೆ ಮಕ್ಕಳೇ ಬೇಡ ಎಂದು ದಂಪತಿ ಹೇಳಿದ್ದಾರೆ.
Advertisement
ಇನ್ನು ರಾಷ್ಟ್ರಮಟ್ಟದ ಶೂಟರ್ ಆಗಿರುವ ಸುಭಾಷ್ ಚಂದ್ರ ಅವರು ಕೇಂದ್ರ ಕ್ರೀಡಾ ಸಚಿವರಾಗಿರುವ ರಾಜವರ್ಧನ್ ಸಿಂಗ್ ರಾಥೋಡ್‍ರ ಶಿಷ್ಯರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ಈ ದಂಪತಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಈ ಕುರಿತಂತೆ ಪತ್ರ ಬರೆದಿರುವ ದಂಪತಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರಿಗೆ ಈ ಕುರಿತು ಮನವಿ ಮಾಡಿದ್ದಾರೆ.