ಕೇಂದ್ರ ಸಚಿವ ಭಗವಂತ ಖೂಬಾ ವಾಹನದ ಮೇಲೆ ಕಲ್ಲು ತೂರಾಟ

Public TV
2 Min Read
BAGAVNTHKUBA

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಮಾಡಿ ಹೊರ ಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಅಲ್ಪಸಂಖ್ಯಾತ ಸಮುದಾಯದವರು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ.

BAGAVANTHAKHUBA

ಜಿಲ್ಲಾಡಳಿತದ ನಿರ್ದೇಶನದಂತೆ ಶಿವಲಿಂಗ ಪೂಜೆ ಸಲ್ಲಿಸಲು 10 ಜನರಿಗೆ ಅವಕಾಶ ನೀಡಲಾಗಿತ್ತು. ಹಾಗೇ ಪೂಜೆ ಸಲ್ಲಿಸಲೆಂದು ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್, ಬಸವರಾಜ ಮತ್ತಿಮಡು, ಕಡಗಂಚಿ ಮಠದ ವೀರಭದ್ರ ಸ್ವಾಮೀಜಿ ಸೇರಿದಂತೆ ಹತ್ತು ಜನರ ತಂಡವು ದರ್ಗಾ ಪ್ರವೇಶ ಮಾಡಿತ್ತು. ಪೂಜೆ ಸಲ್ಲಿಸಿ ಹೊರ ಬರುತ್ತಿರುವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು ಕಲ್ಲು ತೂರಾಟ ಮಾಡಿದ್ದಾರೆ. ಇದನ್ನೂ ಓದಿ:ಶಿವಲಿಂಗ ವಿಚಾರವಾಗಿ ಆಳಂದದಲ್ಲಿ ಘರ್ಷಣೆ – ಲಾಠಿಚಾರ್ಜ್, ಬಿಗಿ ಬಂದೋಬಸ್ತ್

ಕೇಂದ್ರ ಸಚಿವರ ಕಾರ್, ಸ್ಥಳದಲ್ಲಿದ್ದ ಪೊಲೀಸ್, ಮಾಧ್ಯಮದರ ಮೇಲೆ ಕಲ್ಲು ತೂರಾಟವಾಗಿದ್ದು, ವಿದ್ಯುನ್ಮಾನ ಮಾಧ್ಯಮದ ಹಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು, ಅನ್ಯ ಕೋಮಿನ ಜನರು ಕಲ್ಲು ಮತ್ತು ಬಡಿಗೆಗಳಿಂದ ವಾಹನಗಳ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಸಚಿವರ ಕಾರು ಸೇರಿದಂತೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ ಅವರ ವಾಹನದ ಮೇಲೂ ಕಲ್ಲು ತೂರಾಟವಾಗಿದ್ದು, ಹಿಂಬದಿಯ ಸೈಡ್ ಗಾಜು ಪುಡಿಯಾಗಿದೆ.

alanda shivalinga 2

ಜಿಲ್ಲೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ:
ಕಲ್ಲು ತೂರಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಶಿವರಾತ್ರಿ ದಿನದಂದು ವಿಶೇಷ ಪೂಜೆ ಮಾಡಲು ಬಂದಂತಹ ಸಂದರ್ಭದಲ್ಲಿ ಅನ್ಯಧಮಿ9ಯರು ಕಲ್ಲು ತೂರಾಟ ಮಾಡಿದ್ದು, ಖಂಡನೀಯ. ಸಹೋದರತೆ, ಸಹಬಾಳ್ವೆಯಿಂದ ಇರುವ ಮನಸ್ಸು ಆ ಧರ್ಮಿಯರಿಗೆ ಇಲ್ಲವಾಗಿದೆ. ಇಡೀ ದೇಶವೇ ಆ ಸಮುದಾಯದ ವರ್ತನೆಯನ್ನು ನೋಡುತ್ತಿದ್ದು, ಇದು ಒಳ್ಳೆಯ ಸಂಗತಿ ಅಲ್ಲ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

alanda shivalinga 1

ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಮಾತನಾಡಿ, ಶಾಂತಿಯುತವಾಗಿ ಜಿಲ್ಲಾಡಳಿತ ಶಿವಲಿಂಗ ಪೂಜೆ ಮಾಡಲು ಅನುಮತಿ ನೀಡಿತ್ತು. ಆದರೆ ಮುಸ್ಲಿಂ ಸಮುದಾಯದ ಜನರು ಇದನ್ನು ಸಹಿಸದೆ ನಮ್ಮ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಉದ್ವೀಗ್ನ ಸ್ಥಿತಿಗೆ ಕಾರಣರಾದವರನ್ನು 48 ಗಂಟೆಗಳಲ್ಲಿ ಹಿಡಿದು ಒಳಗೆ ಹಾಕಬೇಕು. ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಶಿವಲಿಂಗಕ್ಕೆ ಪೂಜೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕು. ಹಾಗೇ ಸಾರ್ವಜನಿಕ ಭಯಭೀತರಾದೇ ಇಲ್ಲಿ ಬಂದು ಪೂಜೆಯನ್ನು ಮಾಡಬೇಕು ಇದಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *