ಬಾಗಲಕೋಟೆ: ನಗರದಲ್ಲಿ ಟ್ರಾಫಿಕ್ ನಿಯಮಗಳನ್ನ ಪಾಲನೆ ಮಾಡದ ವಾಹನ ಸವಾರರಿಗೆ ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು ಸಿಹಿ ಹಂಚುವ ಮೂಲಕ ಇನ್ನು ಮುಂದೆ ಕಡ್ಡಾಯವಾಗಿ ಟ್ರಾಫಿಕ್ ನಿಯಮಗಳನ್ನ ಪಾಲಿಸುವಂತೆ ತಿಳುವಳಿಕೆ ಹೇಳಿದ್ದಾರೆ.
Advertisement
ಏಪ್ರಿಲ್ 3 ರವರೆಗೆ ಟ್ರಾಫಿಕ್ ನಿಯಮಗಳನ್ನ ಪಾಲಿಸದ ವಾಹನ ಸವಾರರ ಹೆಸರು ಮತ್ತು ವಾಹನದ ನಂಬರ್ ಗಳನ್ನ ಪೊಲೀಸರು ನಮೂದಿಸಿಕೊಂಡು ಫೈನ್ ಹಾಕದೇ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಏಪ್ರಿಲ್ 3 ರ ನಂತರ ಎರಡನೇ ಬಾರಿಗೂ ನಿಯಮಗಳನ್ನ ಪಾಲಿಸದವರಿಗೆ ದಂಡ ಮತ್ತು ವಾಹನ ಪರವಾನಿಗೆಯನ್ನ ರದ್ದುಗೊಳಿಸಲಾಗುವುದು ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಟ್ರಾಫಿಕ್ ಪೊಲೀಸರು ನಗರದ ವಿದ್ಯಾಗಿರಿ, ನವನಗರ, ಎಪಿಎಂಸಿ ಮುಂತಾದ 8 ಮುಖ್ಯ ಮಾರ್ಗಗಳಲ್ಲಿ ಪ್ರತಿಯೊಬ್ಬ ವಾಹನ ಸವಾರರನ್ನು ನಿಲ್ಲಿಸಿ ಮುನ್ಸೂಚೆನೆಯನ್ನು ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಈ ವಿನೂತನ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.