ಬಾಗಲಕೋಟೆ: ಅಕ್ಟೋಬರ್ 28ರ ಒಳಗಡೆ 2022ರ ಸಾಲಿನ ಹೆಚ್ಚುವರಿ 62 ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತರು ಬಾಗಲಕೋಟೆ (Bagalkote) ಸಕ್ಕರೆ ಕಾರ್ಖಾನೆಗಳಿಗೆ (Sugarcane Mill) ಗಡುವು ನೀಡಿದ್ದಾರೆ.
ಮುಧೋಳ ನಗರದ (Mudhol) ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು (Farmers) 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ನೀಡಬೇಕಿದ್ದ 62 ರೂ. ಹಣವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಉಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ
Advertisement
Advertisement
ಒಂದು ವೇಳೆ ಬಾಕಿ ಹಣ ನೀಡದೇ ಇದ್ದರೆ ಅ.28 ರ ನಂತರ ಮುಂದಿನ ಹೋರಾಟದ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು
Advertisement
ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ, ಹನಮಂತ ನಬಾಬ, ಸುರೇಶ ಚಿಂಚಲಿ, ನಾಗೇಶ ಗೊಲಶೇಟ್ಟಿ, ಸುಭಾಶ್ ಶಿರಬೂರ, ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement