ಬಾಗಲಕೋಟೆ: ರಷ್ಯಾದಾಳಿಯ ಬೆನ್ನಲ್ಲೆ ಇಡೀ ಉಕ್ರೇನ್ ದೇಶ ಸ್ಮಶಾನದಂತೆ ಆವರಿಸಿದೆ. ಇತ್ತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ ಭಾರತೀಯ ಮೂಲದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಬಾಗಲಕೋಟೆ ಜಿಲ್ಲೆಯಿಂದ ಸುಮಾರು 23 ವಿದ್ಯಾರ್ಥಿಗಳು ರಕ್ಷಣೆಗಾಗಿ ಪರದಾಟ ನಡೆಸುತ್ತಿದ್ದಾರೆ.
ಬಾಗಲಕೋಟೆ ನಿವಾಸಿಯಾಗಿರುವ ಅಪೂರ್ವ ಕದಾಂಪುರ ಪ್ರಥಮ ವರ್ಷದ ಎಂ.ಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಫೋನ್ ಸಂಪರ್ಕ ಬಂದ್ ಆಗಿದೆ. ಅಲ್ಲದೇ ಅಪೂರ್ವ ಅವರ ಪೋಷಕರಿಗೆ ಕಳುಹಿಸಿದ ವಾಯ್ಸ್ ಮೆಸೇಜ್ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್ ಸೇನೆ
ವಾಯ್ಸ್ ಮಸೇಜ್‍ನಲ್ಲಿ ಏನಿದೆ?: ನಾನು ಇರುವ ಬಂಕರ್ ಪಕ್ಕವೇ ಬಾಂಬ್ ಬ್ಲಾಸ್ಟಿಂಗ್ ಆಗುತ್ತಿದೆ. ಹೀಗಾಗಿ ನಾವು ಬಂಕರ್ ಒಳಗೆ ಹೋಗುತ್ತಿದ್ದೇವೆ. ನಮ್ಮನ್ನು ಟ್ರ್ಯಾಕ್ ಮಾಡಬಾರದು ಎಂದು ಮೊಬೈಲ್ ಸ್ವೀಚ್ ಆಫ್ ಮಾಡುತ್ತಿದ್ದೇವೆ. ನನ್ನ ಮೊಬೈಲ್ ಫ್ಲೈಟ್ ಮೋಡ್‌ನಲ್ಲಿರುತ್ತದೆ. ಮತ್ತೆ ನಾನು ಮೆಸೇಜ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಗಳ ಈ ಮೆಸೇಜ್ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಅಪೂರ್ವ ಇರೋದು ಪೂರ್ವ ಉಕ್ರೇನಲ್ಲಿ ಇರೋದ್ರಿಂದ, ಪಶ್ಚಿಮ ಉಕ್ರೇನ್‍ಗೆ ಬರಲು ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಭಯಭೀತರಾಗಿರುವ ಪೋಷಕರು, ಅಲ್ಲಿರುವ ಮಕ್ಕಳನ್ನ ಸುರಕ್ಷಿತವಾಗಿ ಕರೆತನ್ನಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.