ಬಾಗಲಕೋಟೆ: ಹೃದಯಾಘಾತದಿಂದ ಬಾಗಲಕೋಟೆ ಮೂಲದ ಯೋಧ ಬೆಂಗಳೂರಿನ ಯಲಹಂಕದಲ್ಲಿ ನಿಧನರಾಗಿದ್ದಾರೆ.
ಗುರುರಾಜ್ ಬಡಿಗೇರ್(52) ನಿಧನರಾದ ಸಿಆರ್ ಪಿಎಫ್ ಯೋಧ. ಗುರುರಾಜ್ ಬಡಿಗೇರ್ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಿಂಜವಾಡಗಿ ಗ್ರಾಮದವರಾಗಿದ್ದು, ಸಿಪ್ಟ್ ಬಟಾಲಿಯನ್ ನ್ಯೂದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಗುರುರಾಜ್ ಕಳೆದ ಹದಿನೈದು ದಿನಗಳ ಹಿಂದೆ ಹೈದರಾಬಾದ್‍ನಿಂದ ಯಲಹಂಕಕ್ಕೆ ಬಂದಿದ್ದರು. ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ರಾತ್ರಿ ಹತ್ತು ಗಂಟೆಗೆ ಬಿಂಜವಾಡಗಿ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರಲಿದ್ದು, ರಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಸದ್ಯ ಯೋಧ ಗುರುರಾಜ್ ಅವರ ಮನೆಗೆ ಹುನಗುಂದ ತಹಶೀಲ್ದಾರ ಆನಂದ್ ಕೋಲಾರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ನಿಧನರಾದ ಯೋಧ ಗುರುರಾಜ್ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳು ಇದ್ದಾರೆ. ಗುರುರಾಜ್ 1989-90 ರಲ್ಲಿ ಸಿಆರ್ ಪಿಎಫ್ ಸೇರ್ಪಡೆ ಆಗಿದ್ದರು.