ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗಾಗಿ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆಯನ್ನ ಸಿದ್ಧಪಡಿಸಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಅಭಿಮಾನಿ (Modi Fan) ಆನಂದ ಭಾರತ, ಮೋದಿಗಾಗಿ ಅವರ ತಾಯಿ ಹೀರಾಬೆನ್ ಆಶೀರ್ವಾದ ಮಾಡಿರುವ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ್ದಾರೆ. ಕೇವಲ 13 ಗಂಟೆಗಳಲ್ಲೇ ಮೋದಿ ಹಾಗೂ ತಾಯಿ ಹೀರಾಬೆನ್ ಇರುವ ಭಾವಚಿತ್ರವನ್ನು ತನ್ನ ರಕ್ತದಲ್ಲೇ ಬಿಡಿಸಿದ್ದಾರೆ. ಅದನ್ನು ಇಂದು (ಏ.29) ಮೋದಿಗೆ ನೀಡಲು ಉತ್ಸುಕರಾಗಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?
ಅಲ್ಲದೇ ಮೋದಿ ಇಂದು ಬಾಗಲಕೋಟೆಗೆ ಆಗಮಿಸ್ತಾರೆಂಬ (Bagalkote) ಸುದ್ದಿ ತಿಳಿದ ಬಾಗಲಕೋಟೆ ನಿವಾಸಿ ನಾಗರಾತ್ನಾ ಮೇಟಿ ಅನ್ನೋ ವಿದ್ಯಾರ್ಥಿನಿ ವಿಶೇಷ ಚಿತ್ರಪಟವೊಂದನ್ನು ಬಿಡಿಸಿದ್ದಾಳೆ. ಮೋದಿಯವ್ರ ತಾಯಿ ಹೀರಾಬೆನ್, ಮೋದಿಯವ್ರಿಗೆ ಸಿಹಿ ತಿನ್ನಿಸಿ, ಆಶಿರ್ವಾದ ಮಾಡಿರುವ ಫೋಟೋ ಇದಾಗಿದ್ದು, ವಿದ್ಯಾರ್ಥಿನಿಯ ಕುಂಚದಲ್ಲಿ ಈ ಚಿತ್ರ ಅಂದವಾಗಿ ಮೂಡಿಬಂದಿದೆ.
ಕಾರ್ಯಕ್ರಮ ಆಯೋಜಕರು ಅವಕಾಶ ಕೊಟ್ಟರೆ ಪ್ರಧಾನಿ ಮೋದಿಯವ್ರಿಗೆ ತಾನು ಬಿಡಿಸಿದ ಚಿತ್ರವನ್ನ ಕೊಡುಗೆಯಾಗಿ ಕೊಡಲು ಈ ವಿದ್ಯಾರ್ಥಿನಿ ಬಯಸಿದ್ದಾಳೆ. ಇದನ್ನೂ ಓದಿ: ಪ್ರಸಾದ್ ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು – ಸಿಎಂ ಸಂತಾಪ