ಬಾಗಲಕೋಟೆ: ಭೂಸ್ವಾಧೀನ (Land Acquisition) ಮಾಡಿ ಪರಿಹಾರದ ಹಣವನ್ನು ನೀಡದ್ದಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿನ (Bagalkote DC Office) ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಯುನಿಟ್-3ರ ಅಭಿವೃದ್ಧಿ ಸಂಬಂಧ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್
ಜಮೀನು ವಶಪಡಿಸಿಕೊಂಡರೂ ರೈತರಿಗೆ ಪರಿಹಾರ ಹಣ ವಿತರಣೆಯಾಗಿರಲಿಲ್ಲ. ಹೀಗಾಗಿ 2ನೇ ಕಂತಿನ ಪರಿಹಾರಕ್ಕೆ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ (Court) ರೈತರು ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಪರಿಹಾರ ಕೊಡಬೇಕು ಎಂದು ಆದೇಶಿಸಿತ್ತು.
ಕೋರ್ಟ್ ಆದೇಶವಿದ್ದರೂ ಜಿಲ್ಲಾಡಳಿತ ಹಣವನ್ನು ನೀಡದ್ದಕ್ಕೆ ಇಂದು ಕಚೇರಿಯಲ್ಲಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಮೂರು ಪ್ರಕರಣಗಳ 1.80 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕಿದೆ ಎಂದು ವಕೀಲರು ತಿಳಿಸಿದರು.

