ಬೆಂಗಳೂರು: ಶಾಸಕ ಎಚ್.ವೈ ಮೇಟಿ(HY Meti) ನಿಧನದಿಂದ ತೆರವಾಗಿದ್ದ ಬಾಗಲಕೋಟೆ (Bagalkote) ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪಚುನಾವಣೆ (By Election) ನಡೆಯಲಿದೆ. ಹೀಗಾಗಿ ಟಿಕೆಟ್ ಹಂಚಿಕೆ ಸಂಬಂಧ ತಮ್ಮ ನಿವಾಸ ಕಚೇರಿ ಹಾಗೂ ವಿಧಾನಸೌಧದ ಸರ್ಕಾರಿ ಕಚೇರಿಯಲ್ಲಿ ಮೇಟಿ ಕುಟುಂಬಸ್ಥರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿಯಾಗಿ ಚರ್ಚೆ ನಡೆಸಿದ್ಧಾರೆ.
ಎಚ್.ವೈ.ಮೇಟಿ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ, ಬಾಯಕ್ಕ ಮೇಟಿ, ಮಹಾದೇವಿ ಮೇಟಿ ಆಗಮಿಸಿ ಟಿಕೆಟ್ ಹಂಚಿಕೆ ಸಂಬಂಧ ಚರ್ಚಿಸಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುವಂತೆ ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು
ವಿಧಾನಸೌಧದ ಕಚೇರಿಯಲ್ಲಿನ ರಾಜಿ ಸಂಧಾನಕ್ಕೆ ವಿಪಕ್ಷ ನಾಯಕ ಅಶೋಕ್ (R Ashok) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸಭೆ ನಡೆಸಿದರೆ ತಪ್ಪೇನು ಎಂದು ಸಿಎಂ ಪ್ರಶ್ನೆ ಮಾಡಿದ್ಧಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಎಸ್.ಎಸ್.ಮಲ್ಲಿಕಾರ್ಜುನ ಪುತ್ರ ಸಮರ್ಥ್ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇದನ್ನೂ ಓದಿ: ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ್ರೆ 50 ಸಾವಿರ ಮತಗಳಿಂದ ಸೋಲಿಸುತ್ತೇವೆ: ಕಾಂಗ್ರೆಸ್‌ಗೆ ಮುಸ್ಲಿಮ್ ನಾಯಕರಿಂದ ಚಾಲೆಂಜ್

