Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

Bagalkot

ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

Public TV
Last updated: January 24, 2019 5:15 pm
Public TV
Share
2 Min Read
BGK VIBHUTHI copy
SHARE

ಬಾಗಲಕೋಟೆ: ಭೂಮಿ ಮೇಲಿನ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗುವ ಸುಳಿವು ಐದಾರು ತಿಂಗಳ ಹಿಂದೆಯೇ ಸಿಕ್ಕಿತ್ತಾ ಎಂಬ ಪ್ರಶ್ನೆ ಮೂಡಿದ್ದು, ಕ್ರಿಯಾಸಮಾಧಿಗೆ ಬಳಸಲಾಗಿರುವ ವಿಭೂತಿಗಟ್ಟಿ ತಯಾರಿಸಲು ಶ್ರೀಗಳು ಸೂಚನೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.

ಸಿದ್ದಗಂಗಾ ಶ್ರೀಗಳನ್ನು 6 ತಿಂಗಳ ಹಿಂದೆ ಭೇಟಿಯಾದ ವಿಭೂತಿ ತಯಾರಿಸುವ ಕುಟುಂಬ, ಅಂದು ಶ್ರೀಗಳು ಆಡಿರುವ ಮಾತನ್ನು ಸ್ಮರಿಸಿದೆ. ಸಿದ್ದಗಂಗಾ ಶ್ರೀಗಳು ಆರು ತಿಂಗಳ ಮುಂಚೆಯೇ ಎರಡು ಸಾವಿರ ಕ್ರಿಯಾಗಟ್ಟಿ ಮತ್ತು ಎಂಟು ಸಾವಿರ ವಿಭೂತಿಯನ್ನು ನೀಡಲು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

BGK VIBHUTHI AV 1 copy

ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ತಯಾರು ಮಾಡಿದ ವಿಭೂತಿಗಳನ್ನು ಶ್ರೀಗಳ ಕ್ರಿಯಾಸಮಾಧಿಗೆ ಬಳಸಲಾಗಿದೆ. ಶುದ್ಧ ದೇಶಿ ತಳಿಯ ಆಕಳ ಸಗಣಿಯಿಂದ ಓಂ ನಮಃ ಶಿವಾಯ ಮಂತ್ರ ಪಠಣದೊಂದಿಗೆ ಇವರು ವಿಭೂತಿ ತಯಾರು ಮಾಡುತ್ತಾರೆ. ಈ ಕುಟುಂಬ ಆರು ತಿಂಗಳ ಹಿಂದೆ ತುಮಕೂರಿನಲ್ಲಿ ಶ್ರೀಗಳನ್ನು ಭೇಟಿಯಾಗಿತ್ತು. ಆಗ ಶ್ರೀಗಳು ವಿಭೂತಿ ನೀಡಲು ತಿಳಿಸಿದ್ದರು.

ವೀರಯ್ಯ ಹಿರೇಮಠ ಕುಟುಂಬ ಕಳೆದ 60 ವರ್ಷಗಳಿಂದ ಸಾಂಪ್ರದಾಯಿಕ ವೃತ್ತಿಯನ್ನಾಗಿ ವಿಭೂತಿ ತಯಾರಿಕೆ ಕಾರ್ಯ ಮಾಡುತ್ತಿದೆ. ಇವರು ತಯಾರಿಸುವ ವಿಭೂತಿ ಪವಿತ್ರವಾದದ್ದು ಹಾಗು ಅಷ್ಟೇ ಮಹತ್ವದ್ದು ಎಂದು ಕರೆಯಲಾಗುತ್ತದೆ. ಯಾವುದೇ ಕಲಬೆರಕೆ ಮಾಡದೇ ಪರಿಶುದ್ಧವಾದ ವಿಭೂತಿ ತಯಾರಿಸುವುದು ಇಲ್ಲಿನ ವಿಶೇಷತೆ.

BGK VIBHUTHI AV copy

ದೇಶಿ ತಳಿಯ ಆಕಳುಗಳ ಸಗಣಿ ಬಳಸಿಕೊಂಡು ಅದನ್ನು ಬೂದಿ ಮಾಡಿ ನಂತರ ಅದನ್ನು ಸಾಣಿಗೆಯಲ್ಲಿ ಸೋಸಿ ಬಳಿಕ ಕ್ರಿಯಾಗಟ್ಟಿ ಮತ್ತು ವಿಭೂತಿಯನ್ನಾಗಿ ಮಾಡುತ್ತಾರೆ. ಈ ಕುಟುಂಬ ತಯಾರಿಸಿದ ವಿಭೂತಿಗಳನ್ನು ಯಾವುದೇ ಜಾತ್ರೆ, ಸಂತೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಾಗಿ ವಿಭೂತಿಗಳನ್ನು ಕೇವಲ ಮಠಗಳಿಗೆ ಮಾತ್ರ ನೀಡುವುದು ಮತ್ತೊಂದು ವಿಶೇಷವಾಗಿದೆ. ದೇಶದ ವಿವಿಧ ಪ್ರಮುಖ ಮಠಗಳಿಗೆ ಇವರ ವಿಭೂತಿಗಳು ರವಾನೆಯಾಗುತ್ತವೆ. ಕಂಚಿ, ಕಾಶಿ, ಸಿದ್ದರಾಮೇಶ್ವರ, ಮಠ ಹುಬ್ಬಳ್ಳಿ ಮೂರು ಸಾವಿರ ಮಠ ಸೇರಿದಂತೆ ಪ್ರಮುಖ ಮಠಗಳಿಗೆ ಇವರೇ ವಿಭೂತಿಗಳನ್ನು ಪೂರೈಸುತ್ತಾರೆ.

ಈ ಕುಟುಂಬದ ಸದಸ್ಯರೇ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಭೂತಿಗಳನ್ನು ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು ನೋವು ತಂದಿದೆ. ಅವರ ಕ್ರಿಯಾಸಮಾಧಿಗೆ ನಮ್ಮ ವಿಭೂತಿ ಬಳಸಿಕೊಂಡಿದ್ದು ನಮ್ಮ ಜೀವನ ಪಾವನವಾಯಿತು. ಇದು ನಮಗೆ ಶ್ರೀಗಳ ಆಶೀರ್ವಾದ ಎಂದು ವಿಭೂತಿ ತಯಾರಿಸಿದ ಕುಟುಂಬ ತಿಳಿಸಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಸವಣ್ಣನ ನೆಲದ ವಿಭೂತಿ ಬಳಸಿದ್ದು ವಿಶೇಷವಾಗಿದ್ದು, ಇದಕ್ಕಾಗಿ ಆರು ತಿಂಗಳ ಮುಂಚೆಯೇ ವಿಭೂತಿ ನೀಡಲು ಹೇಳಿದ್ದ ಶ್ರೀಗಳು ಹೇಳಿರುವುದು ಅಚ್ಚರಿ ತಂದಿದೆ.

BGK VIBHUTHI AV 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:bagalakoteKriyasamadiPublic TVSiddaganga SriVibhutiಕ್ರಿಯಾಸಮಾಧಿತುಮಕೂರು ಮಠಪಬ್ಲಿಕ್ ಟಿವಿಬಾಗಲಕೋಟೆವಿಭೂತಿಸಿದ್ದಗಂಗಾ ಶ್ರೀ
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

RCB Team
Bengaluru City

ಆರ್‌ಸಿಬಿ ಅಭಿಮಾನಿಗಳ ಪಾಲಿಗಿಂದು ಬಿಗ್‌ ಡೇ – ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

Public TV
By Public TV
16 minutes ago
Bharat Bandh
Bengaluru City

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Public TV
By Public TV
18 minutes ago
daily horoscope dina bhavishya
Astrology

ದಿನ ಭವಿಷ್ಯ: 12-02-2026

Public TV
By Public TV
45 minutes ago
Public TV celebrates 14th anniversary
Bengaluru City

ನಿಮ್ಮ ʻಪಬ್ಲಿಕ್‌ ಟಿವಿʼಗೆ 14ನೇ ವಸಂತ – ಸಾರ್ಥಕ ಪಯಣದ ಹಿಂದಿದೆ ಸ್ಫೂರ್ತಿದಾಯಕ ಕಥೆ

Public TV
By Public TV
57 minutes ago
Sherfane Rutherford
Cricket

ರುದರ್‌ಫೋರ್ಡ್‌ ಬೆಂಕಿ ಬ್ಯಾಟಿಂಗ್‌ಗೆ ಇಂಗ್ಲೆಂಡ್‌ ಬರ್ನ್‌!

Public TV
By Public TV
9 hours ago
01 5
Big Bulletin

ಬಿಗ್‌ ಬುಲೆಟಿನ್‌ 11 February 2026 ಭಾಗ-1

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?