– ಮಸೀದಿಯಿಂದಲೇ ಮುಸ್ಲಿಮರ ಪುಂಡಾಟಿಕೆ; 8 ಮಂದಿ ಅರೆಸ್ಟ್, 3 ಕಡೆ ಕರ್ಫ್ಯೂ
ಬಾಗಲಕೋಟೆ: ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ (Bagalkote) ನಡೆದ ಶಿವಾಜಿ ಭಾವಚಿತ್ರ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಿದ್ದಾರೆ (Stone Pelting). ಕಿಲ್ಲಾ ಓಣಿಯಲ್ಲಿದ್ದ ಮಸೀದಿಯಿಂದಲೇ ಕಲ್ಲು-ಚಪ್ಪಲಿ ತೂರಿ ಬಂದಿದ್ದು, ಭದ್ರತೆಗೆ ನಿಂತಿದ್ದ ಎಸ್ಪಿ ಸಿದ್ಧಾರ್ಥ್ ಗೋಯೆಲ್ ಅವರ ಮೇಲೆ ಬಿದ್ದಿದೆ. ಅಲ್ಲದೆ, ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಎಂಬಾತನ ತಲೆಗೆ ಕಲ್ಲುಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಸ್ಲಿಂ ಯುವಕರ (Muslims Youth) ಪುಂಡಾಟದ ಮಧ್ಯೆ ತರಕಾರಿ ಮಾರುಕಟ್ಟೆ ಬಳಿ ತಳ್ಳೋಗಾಡಿಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ರು. ತಕ್ಷಣವೇ ಪೊಲೀಸರು ಬೆಂಕಿ ನಂದಿಸಿದ್ರು. ಇವತ್ತು ಬೆಳಗ್ಗೆ ಕೂಡ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಕಿಡಿಗೇಡಿಗಳು ಅಂಗಡಿಗಳ ಮೇಲೆ ಕಲ್ಲು ತೂರಾಟಕ್ಕೆ ಮುಂದಾಗುತ್ತಿದ್ದಂತೆ, ಪೊಲೀಸರು ಲಾಠಿಪ್ರಹಾರ ನಡೆಸಿ ಉದ್ರಿಕ್ತರನ್ನ ಚದುರಿಸಿದ್ರು. ಇದನ್ನೂ ಓದಿ: ಬಾಗಲಕೋಟೆ ಕಲ್ಲು ತೂರಾಟ ಕೇಸ್ – ಪುಂಡರ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ: ಸಿಎಂ

ಇನ್ನೂ ಗುರುವಾರ (ನಿನ್ನೆ) ರಾತ್ರಿ ಕಲ್ಲು ತೂರಾಟ ನಡೆಸಿದ ಪ್ರಮುಖ ಆರೋಪಿ ತನ್ವೀರ್ ಹವಾಲ್ದಾರ್ ಸೇರಿದಂತೆ, 8 ಮುಸ್ಲಿಂ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ 18 ರಿಂದ 25 ವರ್ಷದೊಳಗಿನವರಾಗಿದ್ಧಾರೆ. ಈ ಮಧ್ಯೆ, ನಿಮಗೆ ಧೈರ್ಯವಿದ್ದರೆ ಕಲ್ಲು ತೂರಿದವರ ಗುಂಪಿಗೆ ಹೊಡೀರಿ. ಮೇಲೆ ಮೋದಿ ಸರ್ಕಾರವಿದೆ ಅಂತ ಎಸ್‌ಪಿ ಸಿದ್ಧಾರ್ಥ್ ಗೋಯಲ್ ಮೇಲೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಸಿಟ್ಟಾದ್ರು.
ಮತ್ತೊಂದೆಡೆ, ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಇನ್ನೊಮ್ಮೆ ಶೋಭಾಯಾತ್ರೆ ನಡೀಬೇಕು ಅಂತ ಆಗ್ರಹಿಸಿದ್ರು. ಘಟನೆ ಬೆನ್ನಲ್ಲೇ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ಫೆ. 24ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಸಂಜೆ ಡಿಸಿ ನೇತೃತ್ವದಲ್ಲಿ ಕರೆದಿದ್ದ ಸಂಧಾನ ಸಭೆಗೆ ಮುಸ್ಲಿಂ ಮುಖಂಡರು ಗೈರಾಗಿದ್ದರು. ಹಾಗಾಗಿ, ಹಿಂದೂ ಮುಖಂಡರು ಸಭೆ ಬಹಿಷ್ಕರಿಸಿದರು. ಇದನ್ನೂ ಓದಿ: ಬಾಗಲಕೋಟೆಯ ಫಿಶ್, ತರಕಾರಿ ಮಾರ್ಕೆಟ್ ಮೇಲೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

ಡಿಸಿ ನೇತೃತ್ವದ ಶಾಂತಿ ಸಭೆ ವಿಫಲ
ಬಾಗಲಕೋಟೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕರೆಯಲಾಗಿದ್ದ ಶಾಂತಿ ಸಭೆ ವಿಫಲವಾಗಿದೆ.
ಶಾಂತಿ ಸಭೆಗೆ ಹಿಂದೂ ಮುಖಂಡರು ಹಾಜರಾಗಿದ್ದರು. ಆದ್ರೆ ಮುಸ್ಲಿಂ ಮುಖಂಡರು ಗೈರಾದ ಹಿನ್ನೆಲೆ ಶಾಂತಿ ಸಭೆ ವಿಫಲವಾಗಿದೆ. ಇದರಿಂದ ಆಕ್ರೋಶಗೊಂಡ ಹಿಂದೂ ಮುಖಂಡರೂ ಸಭೆ ತ್ಯಜಿಸಿ ಹೊರನಡೆದರು. ಬಳಿಕ ಎಲ್ಲರನ್ನ ಸಮಾಧಾನಪಡಿಸಿದ ಡಿಸಿ ಫೆ.22 ರಂದು ಮತ್ತೆ ಶಾಂತಿ ಸಭೆ ಕರೆದಿದ್ದಾರೆ. ಇದನ್ನೂ ಓದಿ: ಮಸೀದಿಯಿಂದ ಕಲ್ಲು ಎಸೆಯಲಾಗಿದೆ, ನನ್ನ ಮೇಲೂ ಕಲ್ಲು ಬಿದ್ದಿತ್ತು: ಬಾಗಲಕೋಟೆ ಎಸ್ಪಿ

