ಬಾಗಲಕೋಟೆ: ಪಶ್ಚಿಮ ಬಂಗಾಳದಲ್ಲಿ (West Bengal) ಬಾಗಲಕೋಟೆ (Bagalkot) ಮೂಲದ ಬಿಎಸ್‍ಎಫ್ ಯೋಧರೊಬ್ಬರು (BSF Soldier) ಹುತಾತ್ಮರಾಗಿದ್ದಾರೆ. ಗುಂಡು ತಗುಲಿ ಅವರು ಹುತಾತ್ಮರಾಗಿರುವ ಶಂಕೆ ವ್ಯಕ್ತವಾಗಿದೆ.
ಹುತಾತ್ಮ ಯೋಧನನ್ನು ಗುಳೇದಗುಡ್ಡದ ತಾಲ್ಲೂಕಿನ ಕಟಗೇರಿ ಉಮೇಶ್ ದಬಗಲ್ (33) ಎಂದು ಗುರುತಿಸಲಾಗಿದೆ. ಅವರು 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ಬಿಎಸ್‍ಎಫ್ 05 ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಶುಕ್ರವಾರ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.