ಬಾಗಲಕೋಟೆ: ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿಯ ಕುಟುಂಬಸ್ಥರ ಕೊರೊನಾ ವರದಿ ನೆಗೆಟಿವ್ ಬಂದಿದೆ.
ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಧ್ಯಮ ಬುಲೆಟಿನ್ ನಲ್ಲಿ 12 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದ್ರೆ ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರಿಗೆ ಸೋಂಕು ತಗುಲಿಲ್ಲ ಎಂಬುವುದು ವರದಿಯಲ್ಲಿ ಬಂದಿದೆ. ಜಿಲ್ಲಾಡಳಿತ ಇಂದು ಗ್ರಾಮದ 45 ಜನರ ಗಂಟಲು ದ್ರವ ಪರೀಕ್ಷೆ ವರದಿ ನಿರೀಕ್ಷೆಯಲ್ಲಿದೆ. ಸದ್ಯ ಡಾಣಕಶಿರೂರು ಗ್ರಾಮಸ್ಥರಲ್ಲಿ ಯಾರ ವರದಿ ಪಾಸಿಟಿವ್ ಬರುತ್ತೋ ಎಂಬ ಆತಂಕ ಮನೆ ಮಾಡಿದೆ.
Advertisement
Advertisement
ಬುಧವಾರ ಸೋಂಕು ದೃಢಪಟ್ಟ 12 ಜನರ ಕಾಲ್ ಡೀಟೆಲ್ಸ್ ಕಲೆ ಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈ ಮೂಲಕ 12 ಜನರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರೋ ಜನರನ್ನ ಪತ್ತೆ ಹಚ್ಚಲಾಗುತ್ತಿದೆ.
Advertisement
Advertisement
ಗರ್ಭಿಣಿಯ ಸಂಪರ್ಕದಲ್ಲಿದ್ದ 125ಕ್ಕೂ ಹೆಚ್ಚು ಜನರನ್ನು ಚಿಕ್ಕಮುಚ್ಚಳಗುಡ್ಡ ಗ್ರಾಮದ ಬಳಿಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಸಮರ್ಪಕವಾಗಿ ಊಟ ವಿತರಿಸಿದ ಹಿನ್ನೆಲೆಯಲ್ಲಿ ಜನರು ತಟ್ಟೆ ಹಿಡಿದು ಒಬ್ಬರ ಮೇಲೆ ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂದಿವೆ.