ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

Public TV
1 Min Read
Bagalkot Muchakandi Veerabhadreshwara Swamy Fair 1

ಬಾಗಲಕೋಟೆ: ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಸಾವಿರಾರು ಜನರ ಮಧ್ಯೆ ಐತಿಹಾಸಿಕ ವೀರಭದ್ರೇಶ್ವರ (Veerabhadreshwara) ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರನಿಗೆ ಬೆಳಗಿನ ಜಾವ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಮೃತ್ಯಂಜಯ ಮಂತ್ರ ಪಠಣ, ಶೀವಾಮೃತ ಪಠಣದೊಂದಿಗೆ ಪುಷ್ಪಾಲಂಕಾರ ಮಹಾ ಮಂಗಳಾರತಿ ನಡೆಯಿತು. ಇದನ್ನೂ ಓದಿ: ʻಒಂದು ದೇಶ, ಒಂದು ಚುನಾವಣೆʼ ಮಸೂದೆ ಲೋಕಸಭೆಯಲ್ಲಿ ಮಂಡನೆ – ಮೊದಲ ಬಾರಿಗೆ ಇ-ವೋಟಿಂಗ್‌ ಸಿಸ್ಟಂ ಬಳಕೆ!

Bagalkot Muchakandi Veerabhadreshwara Swamy Fair 2

ಸಂಜೆ 4 ಗಂಟೆಗೆ ಸಣ್ಣ ರಥೋತ್ಸವ (Rathotsava) ನಡೆಯಿತು. ನಂತರ ಸಂಜೆ 5 ಗಂಟೆಗೆ ವೀರಭದ್ರೇಶ್ವರಸ್ವಾಮಿಯ ಮಹಾರಥೋತ್ಸವ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.

ಸಹಸ್ರಾರು ಜನರು ದೀಪಗಳನ್ನು ಬೆಳಗುವ ಮೂಲಕ ದೀಪೋತ್ಸವವನ್ನು ಆಚರಿಸಿದರು. ರಾತ್ರಿ ಶ್ರೀಕೃಷ್ಣ ಪಾರಿಜಾತ ಪ್ರದರ್ಶನಗೊಂಡಿತು. ಭಕ್ತಾದಿಗಳು ಅಗ್ನಿ ಪ್ರವೇಶ ಮಾಡಿ, ವೀರಭದ್ರೇಶ್ವರನಿಗೆ ತಮ್ಮ ಹರಕೆಯನ್ನ ತೀರಿಸಿದರು.

ಜಾತ್ರಾ ಮಹೋತ್ಸವದಲ್ಲಿ ಮುಚಖಂಡಿ ಗ್ರಾಮದ ಗುರು ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.

 

Share This Article