ಬಾಗಲಕೋಟೆ: ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಬೈಕ್ ರ‌್ಯಾಲಿ ನಡೆಸಲು ಮುಂದಾದವರನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದಲ್ಲಿ ನಡೆದಿದೆ.
ರಾಜ್ಯ ಸರ್ಕಾರ ಹಲವು ವಿರೋಧಗಳ ನಡುವೆಯೇ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಮುಂದಾಗಿದೆ. ಈ ಕುರಿತು ಬಾಗಲಕೋಟೆಯ ಇಳಕಲ್ ನಗರದಲ್ಲಿ ಪೂರ್ವಭಾವಿಯಾಗಿ ಇಂದು ಬೈಕ್ ರ‌್ಯಾಲಿ ನಡೆಸಲು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್(ಎಂಐಎಂ) ಕಾರ್ಯಕರ್ತರು ಮುಂದಾಗಿದ್ದರು.
Advertisement
ಇಳಕಲ್ ನಗರದ ಅಂಬೇಡ್ಕರ್ ವೃತ್ತದಿಂದ ಎಂಐಎಂ ಸಂಘಟನೆಯ ಕಾರ್ಯಕರ್ತರು ಬ್ಯಾಕ್ ರ‌್ಯಾಲಿ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ರ‌್ಯಾಲಿಯನ್ನು ತಡೆಯಲು ಯತ್ನಿಸಿದಾಗ ಅವರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
Advertisement
ಕಲ್ಲು ತೂರಾಟದಿಂದಾಗಿ ಒಮ್ಮೆ ಇಳಕಲ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈಗ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು ಘಟನೆ ಸಂಬಂಧ ಎಂಐಎಂ ಸಂಘಟನೆಯ ಮುಖ್ಯಸ್ಥ ಉಸ್ಮನ್ ಗಣಿ ಹುಮನಾಬಾದ್, ಬಾವುದ್ದೀನ್ ಖಾಜಿ, ಸೇರಿದಂತೆ ಹತ್ತು ಮಂದಿಯನ್ನು ಇಳಕಲ್ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
Advertisement
https://www.youtube.com/watch?v=shm9ra8k-rg
Advertisement