ಬಾಗಲಕೋಟೆ: ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಇಂದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.
ಸ್ವಚ್ಛ ಜಮಖಂಡಿ ಹಸಿರು ಜಮಖಂಡಿ ಅಭಿಯಾನವನ್ನು ಶಾಸಕ ಆನಂದ ನ್ಯಾಮಗೌಡ ಹಮ್ಮಿಕೊಂಡಿದ್ದು ನಗರದಲ್ಲಿ ಗಿಡ ನೆಡುವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ.
Advertisement
Advertisement
ಈ ಪ್ರಯುಕ್ತ ಇಂದು ನಗರದ 27, 28, 30ನೇ ವಾರ್ಡ್‍ಗೆ ತೆರಳಿದ ಆನಂದ ನ್ಯಾಮಗೌಡ ಆಯಾ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವಚ್ಛತಾ ಪಾಠ ಮಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಮನೆ, ಬೀದಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ನಗರಸಭೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.
Advertisement
Advertisement
ಇದಾದ ಬಳಿಕ ಶಾಲೆ ಮೈದಾನದಲ್ಲಿ ಹಾಗೂ 27,28,30 ನೇ ವಾರ್ಡ್‍ನ ರಸ್ತೆ ಬದಿಗಳಲ್ಲಿ ನಗರಸಭೆ, ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ನೆಡಲಾಯಿತು.