ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ಶ್ರೀರಾಮುಲು ಅವರ ವಿರುದ್ಧ ವ್ಯಂಗ್ಯವಾಡಿದ್ದು, ನನ್ನ ವಿರುದ್ಧ ನಿಂತು ಸೋತವನೇ ಹೆಲ್ತ್ ಮಿನಿಸ್ಟರ್ ಎಂದು ಹೇಳಿದ್ದಾರೆ.
ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕರು ಕೆರೂರು ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆಯಿದೆ ಎಂದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ಇದನ್ನು ಓದಿ: ಸಿದ್ದು ಸಮಾವೇಶದಲ್ಲಿ ಕುಡುಕನ ‘ಹೌದು ಹುಲಿಯಾ’ ಡೈಲಾಗ್ ಫುಲ್ ವೈರಲ್
ಈ ವೇಳೆ ಶ್ರೀರಾಮುಲು ಅವರ ಕುರಿತು ವ್ಯಂಗ್ಯವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಹೇ ನಿಮ್ಮ ಹೆಲ್ತ್ ಮಿನಿಸ್ಟರ್ ಅವನೇ. ಬಾದಾಮಿಯಲ್ಲಿ ನನ್ನ ವಿರುದ್ಧ ನಿಂತು ಸೋತನಲ್ಲ ಅವನೇ. ಅವನು ನನ್ನ ಜೊತೆಗೆ ಮಾತಾಡೋದೇ ಇಲ್ಲಾ. ಪಾಪ ಅವನಿಗೂ ಸ್ವಲ್ಪ ಮತ ಹಾಕಿದ್ದೀರಿ. ಹೆಲ್ತ್ ಮಿನಿಸ್ಟರ್ ಅವರು ಯಾರು? ಹೆಲ್ತು ಮಿನಿಸ್ಟರ್, ಹೆಲ್ತು ಮಿನಿಸ್ಟರ್ ಎಂದು ಪದೇ ಪದೇ ಹೇಳಿ ವ್ಯಂಗ್ಯವಾಡಿದರು.
ಶ್ರೀರಾಮುಲುಗೆ ಆಸ್ಪತ್ರೆಯ ಸಮಸ್ಯೆ ಕುರಿತು ಪತ್ರ ಬರೆಯುತ್ತೇನೆ. ನಿನಗೂ ಕ್ಷೇತ್ರದ ಜನರು ಸಾಕಷ್ಟು ಮತ ನೀಡಿದ್ದಾರೆ ಎಂದು ಹೇಳಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಮಾಡಲು ಪತ್ರದಲ್ಲಿ ತಿಳಿಸುತ್ತೇನೆ. ಆದರೆ ನಾನು ಹೇಳಿದರೆ ಅವನು ಮಾತು ಕೇಳುವುದಿಲ್ಲ. ಆದರೂ ಪತ್ರ ಬರೆಯುತ್ತೇನೆ ಎಂದು ಅಶ್ವಾಸನೆ ನೀಡಿದರು.