ಶಿವಮೊಗ್ಗ: ನಾನು ಶಾಸಕನಾಗಿದ್ದಗಲೆಲ್ಲಾ ಜಿಲ್ಲೆಯ ಭದ್ರಾ ಜಲಾಶಯವು ಭರ್ತಿಯಾಗಿದೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದ್ದಾರೆ.
ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವುದಕ್ಕೂ ಮೊದಲು ಮಾತನಾಡಿದ ಅವರು, ನಾನು ಅದೃಷ್ಟದ ಶಾಸಕ. ನಾನು ಶಾಸಕನಾಗಿದ್ದಗಲೆಲ್ಲಾ ಜಿಲ್ಲೆಯ ಭದ್ರಾ ಜಲಾಶಯವು ಭರ್ತಿಯಾಗಿದೆ, ಸೋತಾಗಲೆಲ್ಲಾ ಭದ್ರಾ ಜಲಾಶಯ ತುಂಬಿಲ್ಲ. ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ಭದ್ರಾ ಜಲಾಶಯ ಈ ವರ್ಷ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಇದರಿಂದ ರೈತ ಕುಟುಂಬಕ್ಕೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಗಳೆಲ್ಲ ಸಮೃದ್ಧಿಯಾಗಲಿವೆ. ಇದೇ ರೀತಿ ಪ್ರತಿವರ್ಷ ಗಂಗಾ ಮಾತೆ ತುಂಬಿ ತುಳುಕಿ ಆರ್ಶೀವಾದಿಸಲಿ ಎಂದು ಸಂತಸವನ್ನು ವ್ಯಕ್ತಪಡಿಸಿದರು.
Advertisement
ಅಷಾಢ ಮುಗಿದ ಮೇಲೆ ಶ್ರಾವಣದಲ್ಲಿ ಸಚಿವ ಸಂಪುಟ ಸ್ಥಾನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವಿದೆ. ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಶಾಸಕ ನಾನೊಬ್ಬನೆ, ಹಾಗಾಗಿ ಹೈ ಕಮಾಂಡ್ ವಿಶ್ವಾಸವಿಟ್ಟು ನನಗೆ ಸಚಿವ ಸ್ಥಾನ ನೀಡಲಿದೆ. ಬೋರ್ಡ್ ಅಧ್ಯಕ್ಷ ಸ್ಥಾನ ನೀಡಿದರೆ ನಾನು ನಿರಾಕರಿಸುತ್ತೇನೆ. ಮಂತ್ರಿಗಿರಿಯನ್ನು ಮಾತ್ರ ಸ್ವೀಕರಿಸುತ್ತೇನೆ ಎಂದರು.
Advertisement
ಮಂತ್ರಿ ಸ್ಥಾನ ನೀಡಲು ನಾನು ಯಾವುದೇ ಒತ್ತಡವನ್ನು ಹಾಕಿಲ್ಲ. ಜಿಲ್ಲೆಯ ಪರಿಸ್ಥಿತಿಗಳು ಸನ್ನಿವೇಶಗಳು ಹೈಕಮಾಂಡ್‍ಗೆ ಗೊತ್ತಿದೆ. ಅದಕ್ಕೆ ಅನುಗುಣವಾಗಿ ಮಂತ್ರಿ ಸ್ಥಾನವನ್ನು ಕೊಡುತ್ತಾರೆ ಎಂಬ ನಂಬಿಕೆ ಇದೆ. ಭದ್ರಾವತಿ ಜನರ ಆರ್ಶೀವಾದ ಮತ್ತು ನನ್ನ ಹಿರಿತನವನ್ನು ಗುರುತಿಸಿ ಜಿಲ್ಲೆಯ ಕಾಂಗ್ರೆಸ್ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಮತದಾರರು ನನಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.