Connect with us

Bagalkot

ಪುರಸಭೆ ಬಿಜೆಪಿ ಸದಸ್ಯನಿಂದ ಗೂಂಡಾಗಿರಿ- ಸಹಾಯಕ ಎಂಜಿನಿಯರ್ ಮೇಲೆ ಹಲ್ಲೆ

Published

on

ಬಾಗಲಕೋಟೆ: ಸಹಾಯಕ ಎಂಜಿನಿಯರ್ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಬಾದಾಮಿ ಪುರಸಭೆ ಬಿಜೆಪಿ ಸದಸ್ಯ ಸಹಚರರನ್ನು ಕಳುಹಿಸಿ ಸಹಾಯಕ ಎಂಜಿನಿಯರ್ ಮೇಲೆ ಗುರುವಾರದಂದು ಹಲ್ಲೆ ನಡೆಸಿದ್ದಾರೆ. ಈ ಘಟನೆ ಶುಕ್ರವಾರದಂದು ಬೆಳಕಿಗೆ ಬಂದಿದೆ.

ಬಾದಾಮಿ ವಾರ್ಡ್ ನಂಬರ್ 22ರ ಬಸವರಾಜ ತೀರ್ಥಪ್ಪನವರ್ ದರ್ಪ ಮೆರೆದ ಬಿಜೆಪಿ ಸದಸ್ಯ. ಮಹ್ಮದ್ ರಿಜ್ವಾನ್ ಹಲ್ಲೆಗೊಳಗಾದ ವ್ಯಕ್ತಿ. ಮಹ್ಮದ್ ರಿಜ್ವಾನ್ ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಿಟ್ಟುಗೊಂಡು ಬಸವರಾಜ ತೀರ್ಥಪ್ಪನವರ್ ನಾಲ್ಕು ಮಂದಿ ಸಹಾಯಕರ ಜೊತೆಗೂಡಿ ಮಹ್ಮದ್ ಮೇಲೆ ಹಲ್ಲೆ ನಡೆಸಿದ್ದರು.

ಈ ಕುರಿತು ಮಹ್ಮದ್ ಬಾದಾಮಿ ಪೊಲೀಸ್ ಠಾಣೆಯಲ್ಲಿ ತಮ್ಮ ಕರ್ತವ್ಯ ಅಡ್ಡಿಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಸವರಾಜ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆಯಿಂದ ಬಸವರಾಜ ತೀರ್ಥಪ್ಪನವರ್ ವಿರುದ್ಧ ಬಾದಾಮಿಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪುರಸಭೆ ಸದಸ್ಯ ಗೂಂಡಾವರ್ತನೆ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಖಂಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in