ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬ್ಯಾಡ್ ಟೈಮ್ ಶುರುವಾಯ್ತಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ‘ಸಿಕಂದರ್’ (Sikandar) ಸಿನಿಮಾ ಬಗ್ಗೆ ನೆಟ್ಟಿಗರಿಂದ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದೆ. ರಶ್ಮಿಕಾ ಇದ್ರೂ ಕೂಡ ‘ಸಿಕಂದರ್’ ಸಿನಿಮಾಗೆ ಬಿಗ್ ಸಕ್ಸಸ್ ಸಿಗದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಸೀತಾ ಪಯಣ’ ಸಿನಿಮಾದಲ್ಲಿ ಧ್ರುವ ಸರ್ಜಾ- ಫಸ್ಟ್ ಲುಕ್ ಔಟ್
ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನ ಎಂಬಂತೆ ಅನಿಮಲ್, ಪುಷ್ಪ 2, ಛಾವಾ ಕೋಟಿಗಟ್ಟಲೇ ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್ ಸೇರಿಕೊಂಡಿತ್ತು. ಬ್ಯಾಕ್ ಟು ಬ್ಯಾಕ್ 3 ಚಿತ್ರ ಬಿಗ್ ಹಿಟ್ ಕೊಟ್ಟಿದ್ದ ನಟಿಗೆ ‘ಸಿಕಂದರ್’ ಚಿತ್ರ ಉತ್ತಮ ಗಳಿಕೆ ಕಾಣದೇ ಇರೋದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ‘ಸಿಕಂದರ್’ ಸಿನಿಮಾ ಮಾಡಿ ನಟಿ ಯಡವಟ್ಟು ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ:ಗಣೇಶ್, ಅಮೃತಾ ಅಯ್ಯರ್ ಸಿನಿಮಾಗೆ ಸಿಕ್ತು ಅದ್ಧೂರಿ ಚಾಲನೆ
ಸಾಲು ಸಾಲು ಸೋಲುಗಳನ್ನೇ ಕಂಡಿದ್ದ ಸಲ್ಮಾನ್ ಖಾನ್‌ಗೆ ಲಕ್ಕಿ ನಟಿ ರಶ್ಮಿಕಾ ಮಂದಣ್ಣನಿಂದ ಬಿಗ್ ಸಕ್ಸಸ್ ಸಿಗಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ‘ಸಿಕಂದರ್’ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ಕೇಳಿ ಬಂದಿಲ್ಲ. ಸಲ್ಮಾನ್ ಖಾನ್ ಜೊತೆ ಸಿನಿಮಾ ನಟಿಸಿದಕ್ಕೆ ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಗಿದೆ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.
ಅಂದಹಾಗೆ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ನಟಿಸಿದ್ದ ‘ಸಿಕಂದರ್’ ಸಿನಿಮಾ ಮಾ.30ರಂದು ರಿಲೀಸ್ ಆಗಿತ್ತು. ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದರು.