ರಾಯಚೂರು: ಹದಗೆಟ್ಟ ರಸ್ತೆ ಹಾಗೂ ಹಾಳಾದ ಹಳ್ಳದ ಸೇತುವೆಯಿಂದಾಗಿ ಹೆರಿಗೆಗಾಗಿ ತುಂಬು ಗರ್ಭಿಣಿಯೊಬ್ಬರು ಅಂಬುಲೆನ್ಸ್ ಹತ್ತಲು ಅರ್ಧ ಕಿ.ಮೀ ನಡೆದು ಬಂದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತುಪ್ಪದೂರಿನಲ್ಲಿ ನಡೆದಿದೆ.
ಗರ್ಭಿಣಿ ಅಡಿವೆಮ್ಮಗೆ ವೈದ್ಯರು ಇಂದು ಹೆರಿಗೆಗೆ ದಿನಾಂಕ ನೀಡಿದ್ದರು. ಆದರೆ ರಸ್ತೆ ಹದಗೆಟ್ಟಿದ್ದರಿಂದ ಅಂಬುಲೆನ್ಸ್ ಗ್ರಾಮಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಡಿವೆಮ್ಮ ಅರ್ಧ ಕಿ.ಮೀ ನಡೆದುಕೊಂಡು ಬಂದು ಅಂಬುಲೆನ್ಸ್ ಹತ್ತಿದ್ದಾರೆ. ತುಪ್ಪದೂರಿನಿಂದ ಕಲ್ಲೂರು ಸರ್ಕಾರಿ ಆಸ್ಪತ್ರೆಗೆ ತೆರಳಲು ಗರ್ಭಿಣಿ ಹರಸಾಹಸ ಪಟ್ಟಿದ್ದಾರೆ. ಗ್ರಾಮದಿಂದ ಸೇತುವೆವರೆಗೆ ಬೈಕ್‍ನಲ್ಲಿ ಬಂದರೂ ಈ ರಸ್ತೆಯಲ್ಲಿ ಅಪಾಯ ತಪ್ಪಿದ್ದಲ್ಲ. ಹೀಗಾಗಿ ನಡೆದುಕೊಂಡೇ ಬಂದು ಸೇತುವೆ ದಾಟಿ ಅಂಬುಲೆನ್ಸ್ ಹತ್ತಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ
Advertisement
Advertisement
ಬಳಿಕ ಸುರಕ್ಷಿತವಾಗಿ ಅಂಬುಲೆನ್ಸ್‌ನಲ್ಲಿ ಕಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆಯೊಳಗೆ ಹೆರಿಗೆಯಾಗುವ ಸಾಧ್ಯತೆಯಿದೆ. ಹದಗೆಟ್ಟ ರಸ್ತೆ ಹಾಗೂ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಗ್ರಾಮಸ್ಥರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದ ಪ್ರಯುಕ್ತ ಜಯನಗರದಲ್ಲಿ 1,000 ಮಹಿಳೆಯರಿಗೆ ಬಾಗಿನ ವಿತರಣೆ