ಬೆಂಗಳೂರು: ಟೊಮೆಟೋ, ಬೆಳ್ಳುಳ್ಳಿ, ಬಾಳೆಹಣ್ಣು ಹೀಗೆ ತರಕಾರಿಗಳ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಕಾದಿದೆ. ಕೋಳಿ (Chicken) ರೇಟ್ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ.
ನಾನ್‌ವೆಜ್ ಪ್ರೀಯರ ಫೇವೆರೆಟ್ ಪುಡ್‌ಗಳಲ್ಲಿ ಒಂದು ಚಿಕನ್. ಆದರೆ ಕೋಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರೋದು ನಾನ್ ವೆಜ್ ಪ್ರೀಯರಿಗೆ ನುಂಗಲಾರದ ತುತ್ತಾಗಿದೆ. ಆಷಾಢ ಕಳೆದು ಶ್ರಾವಣ (Shravana) ಆರಂಭವಾದ ಹಿನ್ನೆಲೆ, ಕೋಳಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶ್ರಾವಣದಲ್ಲಿ ನಾನ್‌ವೆಜ್ ತಿನ್ನುವವರ ಸಂಖ್ಯೆಯೂ ಕಡಿಮೆಯಿರುವುದರಿಂದ ರೈತರು ಹಾಗೂ ಕಂಪನಿಗಳು ಮರಿಗಳ ಸಾಕಾಣಿಕೆಯನ್ನು ಕಡಿಮೆ ಮಾಡುತ್ತಿದ್ದಾರೆ.
Advertisement
Advertisement
ಈ ಹಿನ್ನೆಲೆ ಶ್ರಾವಣ ಆರಂಭವಾಗಿರುವುದರಿಂದ ಕೋಳಿಗಳು ಡಿಮ್ಯಾಂಡ್‌ಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಜೊತೆಗೆ ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಕಡಲೆಕಾಯಿ ಹಿಂಡಿ, ಸೋಯಾ ಬೆಲೆಯಲ್ಲೂ 25% ರಿಂದ 30% ರಷ್ಟು ಏರಿಕೆಯಾಗಿದೆ. ಇಂಧನ ಬೆಲೆ ಹೆಚ್ಚಳದಿಂದಾಗಿ ಸಾಗಣೆ ವೆಚ್ಚವೂ ಅಧಿಕವಾಗಿರುವುದರಿಂದ ಕೋಳಿಗಳ ಬೆಲೆಯೂ ಹೆಚ್ಚಳವಾಗಿದೆ.
Advertisement
ಕೋಳಿಗಳ ಬೆಲೆ(1 ಕೆಜಿಗೆ):
ಬಾಯ್ಲರ್ ಕೋಳಿ – 170 ರೂ.
ಫಾರಂ ಕೋಳಿ- 140 ರೂ.
ನಾಟಿ ಕೋಳಿ (ಫಾರಂ) -350 ರೂ.
ಜವಾರಿ ನಾಟಿ ಕೋಳಿ – 550 ರೂ. ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ
Advertisement
ಈಗಷ್ಟೇ ಶ್ರಾವಣ ಆರಂಭವಾಗಿದ್ದು, ದಿನಕಳೆದಂತೆ ಕೋಳಿಗಳ ಬೆಲೆ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ಕೋಳಿಗಳ ಬೆಲೆ ಹೆಚ್ಚಾಗಿರೋದ್ರಿಂದ ಮಾಂಸದ ರೇಟ್ ಸಹ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಇದನ್ನೂ ಓದಿ: ಆಪರೇಷನ್ ಬಿಪಿಎಲ್ ಕಾರ್ಡ್- ಸತ್ತವರ ಹೆಸ್ರಲ್ಲೂ ಅಕ್ಕಿ ಪಡೆಯುತ್ತಿದ್ದ ಕುಟುಂಬಸ್ಥರು
Web Stories