ಬೀದರ್: ನಮ್ಮ ಪಕ್ಷದ ಕೇಂದ್ರ ಸಚಿವರಾಗಿ ನನ್ನ ಬೆನ್ನಿಗೆ ಚೂರಿ ಹಾಕುತ್ತೀರಿ, ನನಗೆ ಎಷ್ಟು ಕಿರುಕುಳ ಕೊಡುತ್ತೀರಿ ಎಂದು ಸಚಿವ ಪ್ರಭು ಚವ್ಹಾಣ್ (Prabhu Chauhan) ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ವಿರುದ್ಧ ಕೆಂಡ ಕಾರಿದ್ದಾರೆ.
ಬೀದರ್‌ನಲ್ಲಿ (Bidar) ಸುದ್ದಿಗೋಷ್ಠಿ ಮಾಡಿದ ಚವ್ಹಾಣ್, ನಮ್ಮ ಚುನಾವಣೆ ಬಂದಾಗ ವಿರೋಧ ಮಾಡುತ್ತೀರಿ, ನಿಮ್ಮ ಚುನಾವಣೆ ಬಂದಾಗ ಕ್ಷೆಮೆ ಕೇಳುತ್ತೀರಿ. ಇದು ಯಾವ ರಾಜನೀತಿ ಸ್ವಾಮಿ? ಎಂದು ಖೂಬಾಗೆ ಪ್ರಶ್ನೆ ಮಾಡಿದರು.
ನಮ್ಮ ಪಾರ್ಟಿ ಎಂಪಿ, ಸಚಿವನಾಗಿ, ನನ್ನ ಸೋಲಿಸಲು ಕುತಂತ್ರ ಮಾಡುತ್ತಿದ್ದೀರಿ. ಹೀಗಾಗಿ ನಾನು ಪ್ರಧಾನಿ ಮೋದಿಗೆ, ನಡ್ಡಾ, ಅಮಿತ್ ಶಾ, ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನಿಮ್ಮ ವಿರುದ್ಧ ದೂರು ಕೊಡುತ್ತೇನೆ. ನನ್ನನ್ನು ಸೋಲಿಸಲು ಪ್ರಯತ್ನ ಮಾಡುತ್ತೀರಿ, ನಾನೇನು ತಪ್ಪು ಮಾಡಿದ್ದೇನೆ ಸ್ವಾಮಿ? ನೀವು ಪ್ರಭು ಚವ್ಹಾಣ್‌ಗೆ ದ್ರೋಹ ಮಾಡಿಲ್ಲಾ, ಪ್ರಧಾನಿ ಮೋದಿಗೆ, ಬೊಮ್ಮಾಯಿಗೆ, ಪಕ್ಷಕ್ಕೆ ದ್ರೋಹ ಮಾಡಿದ್ದೀರಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ
ನಿಮ್ಮ ಮೇಲೆ ಭರವಸೆ ಇಲ್ಲ. ಹೀಗಾಗಿ ನನಗೆ ಜೀವ ಬೆದರಿಕೆ ಇದ್ದು ನಾನು ನಿಮ್ಮ ವಿರುದ್ಧ ಎಸ್‌ಪಿಗೆ, ಐಜಿಗೆ ದೂರು ನೀಡುತ್ತೇನೆ ಎಂದು ಬೀದರ್‌ನಲ್ಲಿ ಸಚಿವ ಪ್ರಭು ಚವ್ಹಾಣ್ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀವೇ ಸಿಎಂ ಆಗಿ – ಡಿಕೆಶಿ ಪಟ್ಟು, ಧರ್ಮ ಸಂಕಟದಲ್ಲಿ ಖರ್ಗೆ