ರಾಯಚೂರು: ಹರಿಯಾಣದಲ್ಲಿ ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗಿದೆ, ಜನರ ತೀರ್ಪನ್ನು ಒಪ್ಪಿಕೊಳ್ತೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ (Sindhanuru) ರೈತ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
Advertisement
ಹರಿಯಾಣದಲ್ಲಿ (Hariyana) ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ನನಗೆ ಬಹಳ ಆತ್ಮವಿಶ್ವಾಸವಿತ್ತು. ಇನ್ನೂ ಕೂಡ ಫೈನಲ್ ರಿಸಲ್ಟ್ ಬಂದಿಲ್ಲ. ಜನರು ನಮಗೆ ತೀರ್ಪು ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಹಿನ್ನಡೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಾವು ಎಲ್ಲಿ ಎಡವಿದ್ದೀವಿ ಎಂಬುದರ ಕುರಿತು ಪರಿಶೀಲನೆ ಮಾಡುತ್ತೇವೆ. ಆದರೆ ಜನರು ನೀಡಿರುವ ತೀರ್ಪಿನ ಬಗ್ಗೆ ನಾವು ಗೌರವ ಕೊಡಲೇಬೇಕು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಬೈಕ್ ಡಿಕ್ಕಿ – ಮಹಿಳೆ ಸ್ಥಳದಲ್ಲೇ ಸಾವು
Advertisement
Advertisement
ರೈತ ದಸರಾ ಕಾರ್ಯಕ್ರಮ:
ನಾನು ಇಲ್ಲಿಗೆ ಡಿಸಿಎಂ ಆಗಿ ಬರಲಿಲ್ಲ, ಪಕ್ಷದ ಅಧ್ಯಕ್ಷನಾಗಿಯೂ ಬಂದಿಲ್ಲ. ರೈತನ ಮಗನಾಗಿ ಬಂದಿದ್ದೇನೆ. ನಾನು ಕೃಷಿಯಲ್ಲಿ ಹೆಚ್ಚು ತೊಡಗದಿದ್ದರೂ ನಮ್ಮವರಿಗೆ ಸ್ಪಂದಿಸುತ್ತೇನೆ. ಟಿಬಿ ಡ್ಯಾಂ ಗೇಟ್ ಕೊಚ್ಚಿ ಹೋದದ್ದನ್ನು ಒಂದೇ ವಾರದಲ್ಲೇ ಆಗಬೇಕು ಅಂತಾ ಕೆಲಸ ಮಾಡಿ ಮುಗಿಸಿದ್ದೇವೆ. ಆಗ ಬಿಜೆಪಿ ಸ್ನೇಹಿತರು ವಿಜಯೇಂದ್ರ, ಆರ್.ಅಶೋಕ್ ನನ್ನ ಟೀಕೆ ಮಾಡಿದ್ದರು. ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತವೆ. ಹಾಗೆಯೇ ಟೀಕೆಗಳು ಸತ್ತು ಹೋದವು. ಕೆಲಸ ಉಳಿದಿದೆ ಎಂದರು.
Advertisement
ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಿಟೈರ್‌ಮೆಂಟ್ ಇಲ್ಲ. ಸೈನಿಕ, ಶಿಕ್ಷಕ, ಕೃಷಿಕ ಪಿಲ್ಲರ್ ಇದ್ದ ಹಾಗೆ. ಮನುಷ್ಯರಿಗೆ ನಂಬಿಕೆ ಇಲ್ಲ ಎಂದರೆ ಯಾವ ಸಂಬಂಧವೂ ಇರಲ್ಲ. ತುಂಗಭದ್ರಾ ಯೋಜನೆಯ ಸಾಧಕ-ಬಾಧಕಗಳ ಕುರಿತು ಈ ಭಾಗದ ಹೋರಾಟಗಾರರು ಅರ್ಜಿ ಕೊಟ್ಟಿದ್ದಾರೆ. ಕೂಡಲೇ ಸಭೆ ಕರೆದು ಏನು ಸಹಾಯ ಮಾಡಬೇಕು ಅದನ್ನ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಿಮಗೆ ಒಂದು ಮಾತು ಕೊಡುತ್ತೇನೆ. ದಸರಾ ಹಬ್ಬ ಮುಗಿದ ಬಳಿಕ ಒಂದೇ ತಿಂಗಳಲ್ಲಿ ನೆರೆ ರಾಜ್ಯಗಳ ಜೊತೆ ಮಾತನಾಡಿ ನೀರಾವರಿ ಕುರಿತು ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಮುಡಾ ಕೇಸ್ ವಿಚಾರ:
ಮುಡಾ ಕೇಸ್ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಕಾಂಗ್ರೆಸಿಗರು ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿಗಳಿಗೆ ಯಾವುದೂ ಕೂಡ ಸಂಬಂಧವಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನೂ ರಾಜ್ಯದಲ್ಲಿ ಸಿಎಂ (CM Siddaramaiah) ಬದಲಾವಣೆ ವಿಚಾರವಿಲ್ಲ. ಯಾವ ಬದಲಾವಣೆ ಆಗೋದಿಲ್ಲ. ಅದೆಲ್ಲ ಬೇರೆ ವಿಚಾರ. ನಮ್ಮ ಸರ್ಕಾರ ಇರುತ್ತದೆ. ಸಿಎಂ ಮುಂದುವರಿಯುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: Haryana Results| ಕಾಂಗ್ರೆಸ್ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು