ಕಲಬುರಗಿ: ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು (Sugar Company) ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ನುರಿಸುವ ಕಬ್ಬಿಗೆ ಮೊದಲ ಕಂತಿನ ರೂಪದಲ್ಲಿ ರೈತರಿಗೆ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಪ್ರಸಕ್ತ 2024-25ನೇ ಸಾಲಿನಲ್ಲಿ ಜು.1,2024 ರಿಂದ ಸೆ.30,2025ರ ವರೆಗೆ ಆಳಂದ ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ 9,34,763 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,956 ಸಕ್ಕರೆ ಉತ್ಪಾದಿಸಲಿದೆ. ಶೇ.9.84 ಸಕ್ಕರೆ ಇಳುವರಿ ಬರಲಿದ್ದು, ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,264 ರೂ.ದರ ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್ ಟೈಸನ್ – ಜೇಕ್ ಪಾಲ್ ವಿರುದ್ಧ ಸೋಲು
Advertisement
Advertisement
ಅಫಜಲಪೂರ ತಾಲೂಕಿನ ಚೌಡಾಪುರ ಕೆ.ಪಿ.ಆರ್. ಶುಗರ್ಸ್ ಕಾರ್ಖಾನೆ 11,35,389 ಮೆಟ್ರಿಕ್ ಟನ್ ಕಬ್ಬು (Sugar Cane) ನುರಿಸಲಿದ್ದು, 91,170 ಸಕ್ಕರೆ ಉತ್ಪಾದಿಸಲಿದೆ. ಶೇ.10.12 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,357 ರೂ. ದರ ನಿಗದಿ ಮಾಡಲಾಗಿದೆ. ಅದೇ ರೀತಿ ಅಫಜಲಪೂರ ತಾಲೂಕಿನ ಹವಳಗಾದ ರೇಣುಕಾ ಸಕ್ಕರೆ ಕಾರ್ಖಾನೆ 8,92,152 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 56,828 ಸಕ್ಕರೆ ಉತ್ಪಾದಿಸಲಿದೆ. ಶೇ.9.15 ಸಕ್ಕರೆ ಇಳುವರಿ ಹೊಂದಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ.ದರ ಹಾಗೂ ಯಡ್ರಾಮಿ ತಾಲೂಕಿನ ನಾಗರಹಳ್ಳಿಯ ಉಗಾರ ಸಕ್ಕರೆ ಕಾರ್ಖಾನೆ 3,79,352 ಮೆ.ಟನ್ ಕಬ್ಬು ನುರಿಸಲಿದ್ದು, 34,890 ಸಕ್ಕರೆ ಉತ್ಪಾದಿಸಲಿದೆ. ಶೇ.9 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ. ದರ ನಿಗದಿ ಮಾಡಲಾಗಿದೆ. ರೈತರು ಆಯಾ ಸಮೀಪದ ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡುವ ಮೂಲಕ ಸೌಲಭ್ಯ ಪಡೆಯಬೇಕೆಂದು ಡಿ.ಸಿ. ಕೋರಿದ್ದಾರೆ. ಇದನ್ನೂ ಓದಿ: ಹಾಸನ | ಟ್ರ್ಯಾಕ್ಟರ್, ಬೈಕ್ ನಡುವೆ ಡಿಕ್ಕಿ – ಎಮ್‌ಸಿಎಫ್ ಸಿಬ್ಬಂದಿ ಸಾವು